ನಟ ಚಿರಂಜೀವಿ ಇನ್ನು ನೆನಪು ಮಾತ್ರ. ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದ ಚಿರು ಬಳಲುತ್ತಿದ್ದರು. ಅಪೋಲೋ ವೈದ್ಯರ ತಂಡ ಚಿರು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. 2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಚಿರಂಜೀವಿ ಸರ್ಜಾ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ರಾತ್ರಿಯೇ ಚಿರಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ 3:00 ಗಂಟೆಗೆ ಅಪಾಯಿಂಟ್ಮೆಂಟ್ ಇತ್ತು.
ಇನ್ನು ಚಿರುರವರ ಮರಣೋತ್ತರ ಪರೀಕ್ಷೆ ವೇಳೆ ಅವರಿಗೆ ರಾಷ್ಟ್ರದ ಮೇಲಿದ್ದ ಅಪಾರ ಗೌರವದ ಕುರಿತು ಮಾಹಿತಿ ಹೊರಬಿದ್ದಿದೆ. ನಗರದ ಸಾಗರ್ ಅಪೊಲೋ ಆಸ್ಪತ್ರೆಯಲ್ಲಿ ಚಿರು ಮೃತದೇಹದ ಶವ ಪರೀಕ್ಷೆ ನಡಿಯುತ್ತಿತ್ತು. ಈ ವೇಳೆ ಚಿರು ಕೈಯಲ್ಲಿರುವ ಭಾರತದ ಧ್ವಜ ಹಾಗೂ ಎದೆಯ ಮೇಲಿರುವ ತ್ರಿಶೂಲದ ಹಚ್ಚೆಯನ್ನು ತೆಗೆಯಬೇಡಿ ಎಂದು ಅವರ ಅಮ್ಮಾ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಾಷ್ಟ್ರ ಧ್ವಜವೆಂದರೆ ಅತೀವ ಪ್ರೀತಿಯನ್ನು ಚಿರು ಹೊಂದಿದ್ದರಂತೆ. ಹಾಗಾಯಿಯೇ ಕೈನಲ್ಲಿ ಅದರ ಟ್ಯಾಟೂ ಹಾಕಿಸಿಕೊಂಡಿದ್ದರಂತೆ.
ಶವ ಪರೀಕ್ಷೆ ವೇಳೆ ಚಿರುರವರ ತಾಯಿ ಏನಾದರೂ ಮಾಡಿ. ಆದರೆ ಮಗನ ಕೈಯಲ್ಲಿರೋ ಭಾರತದ ಧ್ವಜ ಹಾಗೂ ತ್ರಿಶೂಲದ ಹಚ್ಚೆಯನ್ನ ತೆಗೆಯಬೇಡಿ ಅಂತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಚಿರಂಜೀವಿ ಸರ್ಜಾರಿಗೆ ದೇಶದ ಧ್ವಜ ಹಾಗೂ ತ್ರಿಶೂಲ ಎಂದರೆ ಅತೀವ ಪ್ರೀತಿ ಇತ್ತು. ಹೀಗಾಗಿ ಅವರು ತಮ್ಮ ಕೈಮೇಲೆ ಭಾರತದ ಧ್ವಜದ ಹಚ್ಚೆ ಹಾಕಿಸಿಕೊಂಡಿದ್ದರು. ಎದೆಯ ಮೇಲೆ ತ್ರಿಶೂಲದ ಹಚ್ಚೆಯನ್ನೂ ಹಾಕಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಚಿರು ಅಮ್ಮಾ ಮರಣೋತ್ತರ ಪರೀಕ್ಷೆ ವೇಳೆ ಹಚ್ಚೆಗಳನ್ನು ಏನೂ ಮಾಡಬೇಡಿ ಅಂತಾ ಕಣ್ಣೀರಿಟ್ಟಿದ್ದಾರೆ.
Comments
Post a Comment