ಅನಂತ್ ಕುಮಾರ್ ಎಂದರೇ ಸಾಕು ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಬೇರುರುವಂತೆ ಮಾಡಿದ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಜೀ ಯವರ ಸೇವೆಯನ್ನು ಪಕ್ಷ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕೇಂದ್ರದ ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಅನಂತ್ ಕುಮಾರ್ ಸಚಿವರಾಗಿದ್ದಗಲೇ ಕ್ಯಾನ್ಸರ್ ಖಾಯಿಲೆಯಿಂದ ವಿಧಿವಶರಾದರು.
ಪಕ್ಷಕ್ಕಾಗಿ ದುಡಿದ ಅನಂತ್ ಕುಮಾರ್ ನಿಧನದ ಬಳಿಕ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಗೆ ಲೋಕಸಭಾ ಟೀಕೆಟ್ ನೀಡಬೇಕು ಎಂಬ ಕೂಗು ಪಕ್ಷದಲ್ಲಿ ಕೇಳಿ ಬಂದಿತ್ತು ಅದರೆ ಅಂತಿಮ ಹಂತದಲ್ಲಿ ಬದಲಾದ ರಾಜಕೀಯ ಸನ್ನೀವೇಶದಿಂದ ಟೀಕೆಟ್ ಕೈ ತಪ್ಪಿತ್ತು. ಈ ಬೆಳವಣಿಗೆಯ ಬಳಿಕ ಹಲವಾರು ರೀತಿಯಲ್ಲಿ ಅಸಮಾಧನಗಳ ಮಾತು ಕೇಳಿ ಬಂದಿತ್ತು, ಬಳಿಕ ತೇಜಸ್ವಿನಿ ಅನಂತ್ ಕುಮಾರ್ ಗೆ ಪಕ್ಷದ ಸಂಘಟನೆಯ ಸಣ್ಣ ಜವಾಬ್ದಾರಿಯನ್ನು ನೀಡುವ ಮೂಲಕ ಅನಂತ್ ಕುಮಾರ್ ರ ಸೇವೆಗೆ ಗೌರವ ಸಲ್ಲಿಸಿತು. ಸದ್ಯ ತೇಜಸ್ವಿನಿ ಅನಂತ್ ಕುಮಾರ್ ಗೆ ಮಹತ್ವದ ಸ್ಥಾನಕ್ಕೆ ಏರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಹೌದು, ಇದೇ ತಿಂಗಳಿನಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದಿಂದ ಎರಡು ಸ್ಥಾನಗಳ ಆಯ್ಕೆ ನಡೆಯಲಿದ್ದು ಇದರಲ್ಲಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಗೆ ರಾಜ್ಯಸಭಾ ಟೀಕೆಟ್ ನೀಡಲು ಸಿದ್ದತೆ ನಡೆಸಿದೆ ಎಂದು ಹೇಳಲಾಗುತ್ತಿದೆ, ಅದರೆ ಈ ಕುರಿತು ಯಾವುದೇ ಮಾಹಿತಿ ಹೊರಬಿಳದಿದ್ದರು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ರಾಜ್ಯಸಭಾ ಟೀಕೆಟ್ ಗೆ ತೇಜಸ್ವಿನಿ ಅನಂತ್ ಕುಮಾರ್ ಆರ್ಹರು ಎಂಬುದು ಸತ್ಯ ಮಾತು.
Comments
Post a Comment