ಭಾರತದಲ್ಲಿ ಐತಿಹಾಸಿಕ ಹೊಸ ದಾಖಲೆ ನಿರ್ಮಿಸಿದ ಬಿಜೆಪಿ..??

ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಎತ್ತಿದ ಕೈ ಎನ್ನಿಸಿದ ಭಾರತೀಯ ಜನತಾ ಪಕ್ಷ, ಇದೀಗ ಹೊಸ ದಾಖಲೆಯೊಂದನ್ನು ಮಾಡಿದೆ. ತನ್ನ ಟ್ವಿಟ್ಟರ್ ಫಾಲೋವರ್ ಗಳನ್ನು 11 ದಶ ಲಕ್ಷಕ್ಕೆ ಹೆಚ್ಚಿಸಿಕೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ," BJP4India ಟ್ವಿಟ್ಟರ್ ಖಾತೆ 11 ದಶಲಕ್ಷ ಫಾಲೋವರ್ ಗಳ ಗಡಿ ದಾಟಿದೆ. ಇದು ನಮಗೆ ಅತೀ ದೊಡ್ಡ ಮೈಲಿಗಲ್ಲು. ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ.
47.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೊದಿ ಅವರು ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ಭಾರತೀಯ ರಾಜಕಾರಣಿ ಎನ್ನಿಸಿದ್ದಾರೆ. ವಿಶ್ವದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ಮೂರನೇ ರಾಜಕಾರಣಿ ಎನ್ನಿಸಿದ್ದಾರೆ. ಮೊದಲ ಸ್ಥಾನವನ್ನು 106 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪಡೆದಿದ್ದರೆ, ಎರಡನೇ ಸ್ಥಾನವನ್ನು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆದಿದ್ದಾರೆ. ಅವರು ಒಟ್ಟು 60.2 ಮಿಲಿಯನ್ ಟ್ವಿಟ್ಟರ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

Comments