ಸೋಮವಾರ ವಿಶ್ವಾಸಮತ ಗೆಲ್ತೇವೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಹುಮತ ಸಾಬೀತುಪಡಿಸುವ ವೇಳೆ ಸರ್ಕಾರದ ಪರವಾಗಿ ಇಬ್ಬರು ಜೆಡಿಎಸ್ ಶಾಸಕರು ಮತ ಹಾಕುವುದಾಗಿ ಹೇಳಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಜೆಡಿಎಸ್ ಶಾಸಕಾಂಗ ಸಭೆ ನಡೆದ ಬಳಿಕ ಇಬ್ಬರು ಶಾಸಕರು ಕರೆ ಮಾಡಿ ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ಹೆಚ್.ಡಿ. ಕುಮಾರಸ್ವಾಮಿ ಅವರಿಗೂ ಹೇಳಿರುವುದಾಗಿ ಅವರು ತಮಗೆ ಮಾಹಿತಿ ನೀಡಿದ್ದು, ಜೆಡಿಎಸ್ ಬಾಹ್ಯ ಬೆಂಬಲ ಪಡೆಯುವ ಕುರಿತಾಗಿ ಯಡಿಯೂರಪ್ಪ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
Comments
Post a Comment