ಮೋದಿ ಪ್ರಮಾಣ ವಚನಕ್ಕೆಂದು ಯಡಿಯೂರಪ್ಪನವರು ದಿಲ್ಲಿಗೆ ಬಂದಿಳಿದಾಗ ಖುಷಿಯಲ್ಲಿದ್ದರು. ಸಂಸದರು ಹಾಗೂ ಬೆಂಬಲಿಗರಿಂದ ತಮ್ಮ ಕೋಣೆ ತುಂಬಿ ತುಳುಕುತ್ತಿದ್ದರೂ ತಾವೇ ಹಾಸ್ಯ ಮಾಡುತ್ತಿದ್ದ ಬಿಎಸ್‌ವೈ, ಪತ್ರಕರ್ತರಿಗೆ ಬಲವಂತವಾಗಿ ಮಾಡಿ ಊಟ ಮಾಡಿಸಿ ಟೇಬಲ್ ಮೇಲೆ ಸಾಕಷ್ಟು ನಕ್ಕರು.
ಅವರು ಬಾಯ್ಬಿಟ್ಟು ಹೇಳದಿದ್ದರೂ, ಅವರ ಆಪ್ತರು ಒಂದು ಲಿಂಗಾಯತ ಕೋಟಾದಿಂದ ಉದಾಸಿ, ಬಸವರಾಜ್ ಅಥವಾ ಕರಡಿ ಸಂಗಣ್ಣ, ಇನ್ನೊಂದು ಒಕ್ಕಲಿಗ ಕೋಟಾದಿಂದ ಶೋಭಾ ಕರಂದ್ಲಾಜೆ ಮಂತ್ರಿ ಆಗಬಹುದು. ಒಬ್ಬ ದಲಿತ, ಜೊತೆಗೆ ಬ್ರಾಹ್ಮಣ-ಆರ್‌ಎಸ್‌ಎಸ್ ಕೋಟಾದಲ್ಲಿ ಜೋಶಿ ಮಂತ್ರಿಯಾಗುವುದು ಪಕ್ಕಾ ಎನ್ನುತ್ತಿದ್ದರು. ಆದರೆ ದಿಲ್ಲಿಯಲ್ಲಿ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಏನಿದ್ದರೂ ಲಿಂಬಾವಳಿ ಮೂಲಕವೇ ಅವರು ದಿಲ್ಲಿ ನಾಯಕರಿಗೆ ಹೆಸರು ಕೊಟ್ಟಿದ್ದು ಅಷ್ಟೆ.
ಬಿಎಸ್‌ವೈ ಎಷ್ಟರವರೆಗೆ ಹಾಸ್ಯದ ಮೂಡ್‌ನಲ್ಲಿ ಇದ್ದರೆಂದರೆ, ಪತ್ರಕರ್ತರು ಶೋಭಾ ಮುಂದಿನ ಮಂತ್ರಿ ಎಂದು ಚಟಾಕಿ ಹಾರಿಸಿದಾಗ ತಾವೂ ಕೂಡ ‘ಬೆಳಗ್ಗೆ ಫೋನ್ ಬಂದರೆ ನಮಗೂ ಹೇಳಿ ಮೇಡಂ’ ಎಂದು ಶೋಭಾಗೆ ಹೇಳಿದರು.
ಶೋಭಾ ‘ಏನ್ ಸರ್ ನಾನೆಲ್ಲಿ ಮಂತ್ರಿ ಆಗುತ್ತೇನೆ. ಡಿವಿಎಸ್ ಇದ್ದಾರೆ ನಮಗಿಂತ ದೊಡ್ಡವರು’ ಎಂದು ಹೇಳಿ ನಗುತ್ತಾ ಹೋದರು. ಆದರೆ ಮರುದಿನ ಜಗದೀಶ್ ಶೆಟ್ಟರ್ ಬೀಗ ಸುರೇಶ್ ಅಂಗಡಿ, ಆರ್‌ಎಸ್‌ಎಸ್ ಹೆಸರು ಹೇಳಿದ ಪ್ರಹ್ಲಾದ್ ಜೋಶಿ ಮತ್ತು ತಮ್ಮ ಸ್ಪರ್ಧಿ ಡಿವಿಎಸ್ ಹೆಸರು ಬಂದ ನಂತರ ಯಡಿಯೂರಪ್ಪ ಅವರ ಮುಖದಲ್ಲಿ ಮೊದಲಿನ ಲವಲವಿಕೆ ಇರಲಿಲ್ಲ. ಆದರೂ ಬೇಸರ ನುಂಗಿಕೊಂಡು ಟೀವಿ ಚಾನಲ್ಲುಗಳಿಗೆ ಬೈಟ್ ಕೊಟ್ಟು ರಾಷ್ಟ್ರಪತಿ ಭವನದ ಕಡೆ ತೆರಳಿದರು. ಯಡಿಯೂರಪ್ಪ ಬಿಡಿ, ಅಮಿತ್ ಶಾ ಕರ್ನಾಟಕದ ವಿಚಾರದಲ್ಲಿ ಸಂತೋಷ್ ಜೊತೆಗೂ ಚರ್ಚೆ ಮಾಡಿಲ್ಲ. ಎಲ್ಲವೂ ಮೋದಿ, ಶಾ ಇಬ್ಬರ ನಿರ್ಧಾರ ಅಷ್ಟೆ.
Refer from: Suvarna news 24x7
Comments
Post a Comment