ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ರಾಷ್ಟ್ರೀಯ ನಾಯಕರು ಬಳ್ಳಾರಿ ಜಿಲ್ಲೆಯ ಮೇಲೆ ವಿಶೇಷ ಕಾಳಜಿ ಮತ್ತು ನಂಬಿಕೆ ಹೊಂದಿದ್ದಾರೆ ಎಂದು ಕಾಂಗ್ರೆಸ್ ಟಾಸ್ಕ್‌ಪೋರ್ಸ್ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸಿರಾಜ್‌ಶೇಕ್ ಹೇಳಿದ್ದಾರೆ.
ಪಟ್ಟಣದ ಎಂ.ವೈ. ಘೋರ್ಪಡೆ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಿ.ಕೆ. ಶಿವಕುಮಾರ್ ಪದಗ್ರಹಣ ಪೂರ್ವಭಾವಿ ಪ್ರತಿಜ್ಞಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಗ್ರಾಮೀಣ ಪ್ರದೇಶದಿಂದದಿಂದಲೇ ಪಕ್ಷವನ್ನು ಬಲಪಡಿಸಲು ಯುವಶಕ್ತಿಯನ್ನು ಸೆಳೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ಪದಗ್ರಹಣಕ್ಕೆ ಬೆಂಗಳೂರಿಗೆ ರಾಜ್ಯದ ಮೂಲೆಮೂಲೆಯಿಂದಲೂ ಪಕ್ಷದ ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಲಕ್ಷಾಂತರ ಸಂಖ್ಯೆಯಲ್ಲಿ ಸೇರುವವರಿದ್ದರು. ಈ ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರೇ ತೆಗೆದುಕೊಂಡಿರುವ ತೀರ್ಮಾನದಂತೆ, ಇಂದಿನ ಕಾಲಕ್ಕೆ ತಕ್ಕಂತೆ ಅಂತರ್ಜಾಲ, ಸಾಮಾಜಿಕ ಜಾಲತಾಣ, ಇತರೆ ಮಾರ್ಗಗಳ ಮೂಲಕ ಜನತೆಯನ್ನು ತಲುಪುವಂತ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.
ಇದೇ ಜೂ. 14ರಂದು ನಡೆಯಲಿರುವ ಪದಗ್ರಹಣದಂದು 8 ಸಾವಿರ ಸ್ಥಳಗಳಲ್ಲಿ ನೇರ ವೀಕ್ಷಣೆ ಮತ್ತು ಕಾರ್ಯಕರ್ತರೊಂದಿಗೆ ನೇರ ಚರ್ಚ ವೀಕ್ಷಣೆ ಮತ್ತು ಕಾರ್ಯಕರ್ತರೊಂದಿಗೆ ನೇರ ಚರ್ಚೆಯನ್ನು ಮಾಡಲಿರುವ ಕಾರ್ಯಕ್ರಮದ ಯಶಸ್ವಿಯ ಪೂರ್ವಭಾವಿ ಸಭೆ ಇದಾಗಿದೆ ಎಂದರು.
Comments
Post a Comment