ಸ್ಪೋಟಕ ಬ್ರೇಕಿಂಗ್: ಕೊರೊನಾಗೆ ಬಲಿಯಾದ ಸಚಿವ.??

ಪಾಕಿಸ್ಥಾನದಲ್ಲಿ ಕೋವಿಡ್‌-19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವಂತೆಯೇ, ಸಿಂಧ್‌ ಪ್ರಾಂತ್ಯದಲ್ಲಿ ಸಚಿವನನ್ನೇ ಬಲಿ ತೆಗೆದುಕೊಂಡಿದೆ.

ಮಾನವ ಸಂಪನ್ಮೂಲ ಸಚಿವ ಗುಲಾನ್‌ ಮುರ್ತಾಜಾ ಬಲೂಚ್‌ ಮೃತರಾದವರು. ಇದರೊಂದಿಗೆ ಪಾಕ್‌ನಲ್ಲಿ ಮೃತಪಟ್ಟವರ ಸಂಖ್ಯೆ 1600ರ ಗಡಿ ದಾಟಿದೆ.

ಮೇ 14ರಂದು ಗುಲಾಮ್‌ ಅವರಿಗೆ ಕೋವಿಡ್‌ ತಗುಲಿತ್ತು. ಮೇ 23ರಂದು ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಕರಾಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದಿನೇ ದಿನೇ ಆರೋಗ್ಯ ಕ್ಷೀಣಿಸಿ ಅವರು ಕೊನೆಯುಸಿರೆಳೆದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

Comments