ಮಾಜಿ ಸಚಿವ ಎಂಟಿಬಿ ನಾಗರಾಜಗೆ ಪರಿಷತ್ ಸ್ಥಾನಕ್ಕಾಗಿ ಭಾರೀ ಲಾಬಿ ನಡೆಸಿದ್ದಾರೆ. ಈ ಸಂಬಂಧ ಇಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಶ್ರೀ ಬನಶಂಕರಿ ಜ್ಯೋತಿಷ್ಯ ಮಂದಿರ, ಶ್ರೀ ಶ್ರೀ ಎಮ್ ಎಚ್ ಆಚಾರ್ಯರು
ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ, ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ. ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9845150507
ಬಳಿಕ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಎಂಟಿಬಿ ನಾಗರಾಜ ಅವರು, ಶಾಸಕ ಸ್ಥಾನ , ಮಂತ್ರಿ ಸ್ಥಾನವನ್ನ ತ್ಯಾಗ ಮಾಡಿ ಪಕ್ಷಕ್ಕೆ ಬಂದಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸರ್ಕಾರ ಬರುವಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಇವರಿಗೆ ಪರಿಷತ್ ಸ್ಥಾನನೀಡಬೇಕಿದೆ. ಅಲ್ಲದೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ಇವರಿಗೆ ಮಾತು ಕೊಟ್ಟಿದ್ದಾರೆ. ಹಾಗಾಗಿ ನಾಗರಾಜ ಅವರನ್ನು ಎಂಎಲ್ಸಿ ಮಾಡಬೇಕು. ಅಲ್ಲದೇ ಎಂಟಿಬಿ ನಾಗರಾಜರನ್ನು ಪಕ್ಷಕ್ಕೆ ನಾನೇ ಕರೆ ತಂದಿದ್ದೇನೆ. ಹಾಗಾಗಿ ಸ್ಥಾನಮಾನ ಕೊಡಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷ ನಳೀನಕುಮಾರ ಕಟೀಲ್ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನವಾಗಲಿದೆ ಎಂದು ಅಶೋಕ ಸ್ಪಷ್ಟಪಡಿಸಿದ್ದಾರೆ.
ಇದೇ ರೀತಿ ಆರ್ ಶಂಕರ್ ಹಾಗೂ ಹೆಚ್ ವಿಶ್ವನಾಥ ಕೂಡ ನಮ್ಮ ಸರ್ಕಾರ ಬರುವಲ್ಲಿ ಶ್ರಮಪಟ್ಟಿದ್ದಾರೆ. ಅವರಿಗೂ ಸ್ಥಾನಮಾನ ನೀಡಬೇಕು. ಈ ಬಗ್ಗೆಯೂ ಯಡಿಯೂರಪ್ಪ ನವರು ಹಾಗೂ ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡ್ತಾರೆ ಎಂದು ಅಶೋಕ ಹೇಳಿದರು. ಎಂಟಿಬಿ ನಾಗರಾಜ ಹೊಸಕೋಟೆ ಭಾಗದಲ್ಲಿ ನಮ್ಮ ಬಿಜೆಪಿ ಪಕ್ಷದ ಪ್ರಶ್ನಾತೀತ ನಾಯಕರಾಗಿದ್ದಾರೆ. ಹೊಸಕೋಟೆಯಲ್ಲಿ ಇವರ ತೀರ್ಮಾನವೇ ಪಕ್ಷದ ತೀರ್ಮಾನ. ಹೊಸಕೋಟೆಯಿಂದ ಯಾರೇ ಪಕ್ಷಕ್ಕೆ ಬರ್ತಿವಿ ಅಂದರು ಸೇರಿಸಿಕೊಳ್ಳಲ್ಲ. ನಾಗರಾಜರನ್ನು ಬಿಟ್ಟು ಹೊಸಕೋಟೆಯಲ್ಲಿ ಪಕ್ಷ ಯಾವುದೇ ತೀರ್ಮಾನ ಮಾಡಲ್ಲ. ನಾನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಂಟಿಬಿ ನಾಗರಾಜ ಪರ ಇದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ನವರ ಜೊತೆಯೂ ಮಾತನಾಡುತ್ತೇವೆ. ಹೊಸಕೋಟೆಯಲ್ಲಿ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂತಾ ಹೇಳುವ ಮೂಲಕ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು.
ಈ ಹಿಂದೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಬಿಜೆಪಿಯಿಂದ ಬಂಡಾಯ ಎದ್ದು ಪಕ್ಷೇತರವಾಗಿ ನಿಂತು, ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಎಂಟಿಬಿ ನಾಗರಾಜ್ ವಿರುದ್ಧ ಸ್ಪರ್ಧಿಸದಂತೆ ಬಿಜೆಪಿ ನಾಯಕರು ಶರತ್ ಬಳಿ ಮನವಿ ಮಾಡಿದ್ದರೂ ಅವರು ಯಾರ ಮಾತಿಗೂ ಬಗ್ಗದೆ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು ಗೆದ್ದಿದ್ದರು. ಇದೀಗ ಸಚಿವ ಆರ್.ಅಶೋಕ್ ಅವರು ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರು ತೆಗೆದುಕೊಳ್ಳುವ ತೀರ್ಮಾನವೇ ಪಕ್ಷದ ತೀರ್ಮಾನ ಎಂದು ಹೇಳುವ ಮೂಲಕ ಶರತ್ ಬಚ್ಚೇಗೌಡ ಅವರಿಗೆ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
Comments
Post a Comment