ಇದೀಗ ಬಂದ ಸುದ್ದಿ: ಖಡಕ್ ಹೇಳಿಕೆಯ ಮೂಲಕ ವದಂತಿಗಳಿಗೆ ಪೂರ್ಣವಿರಾಮವಿಟ್ಟ ಗೃಹ ಸಚಿವ ಅಮಿತ್ ಶಾ.!

ನಾನು ಆರೋಗ್ಯವಾಗಿದ್ದೇನೆ, ಯಾವುದೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಟ್ವೀಟ್ ಮಾಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹರಡುತ್ತಿದ್ದ ರೂಮರ್ಸ್ ಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ.
ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ
ಹಲವಾರು ಜನ ಅಮಿತ್ ಶಾ ಆರೋಗ್ಯದ ಬಗ್ಗೆ ಆಧಾರರಹಿತ ವದಂತಿಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಯಾಗಿ ಬಳಸಿದ್ದಾರೆ ಮತ್ತು ಕೆಲವರು ಅವರ ನಿಧನದ ಬಗ್ಗೆ ಪ್ರಾರ್ಥಿಸಿ ಟ್ವೀಟ್ ಕೂಡ ಮಾಡಿದ್ದರು.

ಜಗತ್ತಿನಾದ್ಯಂತ ಕರೋನವೈರಸ್ ಹರಡುತ್ತಿರುವ ಈ ಸಮಯದಲ್ಲಿ ಗೃಹ ಸಚಿವರಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕಾರ್ಯನಿರತವಾಗಿದ್ದೆ. ಆದರೆ ಕೆಲ ದಿನಗಳ ಹಿಂದೆ ನನ್ನ ಆರೋಗ್ಯದ ಬಗ್ಗೆ, ಸಾವಿನ ಬಗ್ಗೆ ವದಂತಿಗಳು ಹರಡುತ್ತಿರುವುದನ್ನು ನೋಡಿದೆ, ಜನರಿಗೆ ಅವರ ಕಲ್ಪನೆಗಳನ್ನು ಆನಂದಿಸಲು ಅವಕಾಶ ಕೊಟ್ಟೆ, ಅದಕ್ಕಾಗಿಯೇ ನಾನು ಮೊದಲೇ ಪ್ರತಿಕ್ರಿಯಿಸಲಿಲ್ಲ. ಎಂದು ಅವರು ಹೇಳಿದ್ದಾರೆ.
ಜ್ಯೋತಿಷ್ಯಿಗಳನ್ನು ಸುಲಭವಾಗಿ ಸಂಪರ್ಕಿಸಲು ಕೆಳಗಿನ Call Now ಬಟನ್ ಕ್ಲಿಕ್ ಮಾಡಿ
'ಆದಾಗ್ಯೂ, ನನ್ನ ಪಕ್ಷದ ಕಾರ್ಯಕರ್ತರು ಮತ್ತು ಲಕ್ಷಾಂತರ ಹಿತೈಷಿಗಳು ಕಳೆದ ಎರಡು ದಿನಗಳಿಂದ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಅವರ ಚಿಂತೆಗಳನ್ನು ನಾನು ನಿರ್ಲಕ್ಷಿಸಲಾರೆ. ಅದಕ್ಕಾಗಿಯೇ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ' ಎಂದು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ನೀಡಿದ್ದು, ಅದರ ಜೊತೆಗೆ ಒಂದು ಸಂದೇಶವನ್ನು ಸಹ ಟ್ವೀಟ್ ಮಾಡಿದ್ದಾರೆ.

Comments