ಚಿತ್ರದುರ್ಗ, ಏಪ್ರಿಲ್ 28: ಈಶ್ವರಪ್ಪನವರಿಗೆ ನರೇಗಾ ಬಗ್ಗೆ ಏನೂ ಗೊತ್ತಿಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಯಾಗಿ ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, "ಡಿಕೆಶಿ ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ" ಎಂದು ಸವಾಲು ಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, "ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜಕೀಯ ಸಲ್ಲದು. ಅವರು ಬೇಕೆಂದರೆ ರಾಜಕೀಯ ಮಾಡಲು ನಾನು ರೆಡಿ" ಎಂದು ತಿರುಗೇಟು ನೀಡಿದ್ದಾರೆ. "ನರೇಗಾ ಬಗ್ಗೆ ಚರ್ಚಿಸಲು ಎಲ್ಲಿಗೆ ಬೇಕಾದರೂ ಬರಲು ನಾನು ಸಿದ್ದ. ಸವಾಲಿಗೆ ಬೆನ್ನು ಹಾಕಿ ಹೋಗುವವನು ನಾನಲ್ಲ" ಎಂದಿದ್ದಾರೆ.
"ಡಿಕೆಶಿ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ. ಡಿಕೆಶಿ ಸಚಿವರಾಗಿದ್ದಾಗ ಲೂಟಿ ಹೊಡೆದಿದ್ದು ಯಾರು? ಅವರು ಒಳ್ಳೆಯ ಕೆಲಸ ಮಾಡಿದ್ದಾರಾ, ಭ್ರಷ್ಟಾಚಾರ ಮಾಡಿದ್ದಾರಾ ಎಂಬುದು ಚರ್ಚೆ ಆಗಲಿ" ಎಂದು ಪ್ರಶ್ನೆ ಹಾಕಿದರು.
Comments
Post a Comment