ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗಿಫ್ಟ್ ನೀಡಿದ ರಿಲಯನ್ಸ್ ಸಂಸ್ಥೆ.?

ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿಗೊಳಿಸಿದ್ದು ಜಿಯೋ ಗ್ರಾಹಕರಿಗೆ ಲಾಕ್ಡೌನ್ ಜೀವನವನ್ನು ಸುಲಭಗೊಳಿಸಲು ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ 4 ಜಿ ಡೇಟಾವನ್ನು ಹೊಸ ವರ್ಕ್ ಫ್ರಮ್ ಹೋಮ್ ಪ್ಯಾಕ್ ಗ್ರಾಹಕರಿಗೆ ನೀಡಲಾಗುತ್ತಿದೆ. ಜಿಯೋ ಕೆಲವು ಬಳಕೆದಾರರಿಗೆ 2 ಜಿಬಿ 4ಜಿ ಡೇಟಾವನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದೆ.

ಜನ ಮನೆಯಲ್ಲಿರುವ ಕಾರಣ ಇಂಟರ್ ನೆಟ್ ಬಳಕೆ ಜಾಸ್ತಿಯಾಗಿದೆ. ಅದೇ ಉದ್ದೇಶಕ್ಕಾಗಿ ಜಿತಯೋ ಗ್ರಾಹಕರಿಗೆ 2 ಜಿಬಿ 4 ಜಿ ಡೇಟಾ ಉಚಿತವಾಗಿ ನೀಡಲಾಗ್ತಿದೆ. ಹೆಚ್ಚುವರಿ 2 ಜಿಬಿ ಡೇಟಾವನ್ನು ಜಿಯೋ ಡೇಟಾ ಪ್ಯಾಕ್ ಆಯ್ಕೆ ಅಡಿಯಲ್ಲಿ ಬಳಕೆದಾರರು ಉಚಿತವಾಗಿ ಪಡೆಯುತ್ತಿದ್ದಾರೆ. 2 ಜಿಬಿ ಡೇಟಾ 4 ದಿನಗಳವರೆಗೆ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಯೋಜನೆಗಳ ಮೇಲೆ ಸೇರಿಸಲಾಗುತ್ತಿದೆ. ಒಟ್ಟು 8 ಜಿಬಿ ಹೆಚ್ಚುವರಿ ಡೇಟಾವನ್ನು ಹೊಂದಿದೆ. ಈ ಹಿಂದೆ ಯಾವುದೇ ನವೀಕರಣವಿಲ್ಲದೆ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತಿತ್ತು.

ಕೆಲವು ಪ್ಲಾನ್ ಗಳಲ್ಲಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದ್ದು, ತಮ್ಮ ದೈನಂದಿನ ಡೇಟಾ ಮಿತಿ ಬಳಸಿದ ಬಳಿಕ ಉಪಯೋಗಿಸಬಹುದಾಗಿದೆ. ಹೆಚ್ಚುವರಿ 4 ಜಿ ಡೇಟಾವನ್ನು ನೀವು ಪಡೆದುಕೊಂಡಿರುವುದನ್ನು ನಿಮ್ಮ ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿ ಮೇಲಿನ ಎಡ ಮೂಲೆಯಲ್ಲಿ ಹ್ಯಾಂಬರ್ಗರ್ ಟ್ಯಾಪ್ ಮಾಡಿ ಮೈ ಪ್ಲಾನ್ ಆಯ್ಕೆಗಳನ್ನು ಸೇರಿಸಿ. ನಿಮ್ಮ ಯೋಜನೆಯನ್ನು ಉಚಿತ ಡೇಟಾದೊಂದಿಗೆ ಜಿಯೋ ಡೇಟಾ ಪ್ಯಾಕ್ ಸ್ವೀಕರಿಸಿದ್ದರೆ ಜಿಯೋ ಉಚಿತ ಡೇಟಾ ಪ್ಯಾಕ್ ಕೊಡುಗೆಯನ್ನು ಹೆಚ್ಚುವರಿ ಕೊಡುಗೆ ಎಂದು ಗುರುತಿಸಲಾಗುತ್ತದೆ ಎಂದು ಹೇಳಲಾಗಿದೆ.

Comments