ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರವಿ.ಡಿ.ಚೆನ್ನಣ್ಣನವರ್, ಗ್ರಾಮೀಣ ಭಾಗದಲ್ಲಿ ನಿಯಮ ಮಾಡುವ ಮೂಲಕ ಜನತೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದರ ಪರಿಣಾಮವಾಗಿ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಂತಸವ್ಯಕ್ತಪಡಿಸಿದರು. ಕೋವಿಡ್ ಸಂಬಂಧ ನಿಯಮ 11 ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ 1295 ವಾಹನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್ ಮುಗಿಯುವವರೆಗೂ ನೆಪ ಹೇಳಿಕೊಂಡು ನಗರದ ಕಡೆ ಬರುವ ವಾಹನ ಚಾಲಕರಿಂದ ವಾಹನ ವಶಕ್ಕೆ ಪಡೆದು ಪರಿಸ್ಥಿತಿಗೆ ಅನುಗುಣವಾಗಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಕಾರ್ಯಪಡೆ ಸಹಕಾರದೊಂದಿಗೆ ಲಾಕ್‌ಡೌನ್ ಯಶಸ್ವಿಯಾಗಿದೆ. ಹಳ್ಳಿಯ ಜನ ಕೋವಿಡ್ ಸೃಷ್ಟಿಸುತ್ತಿರುವ ಪರಿಸ್ಥಿತಿ ತಿಳಿದು ಮನೆಯಲ್ಲಿದ್ದಾರೆ. ಆದರೆ ಕೆಲವು ನಗರ ಪ್ರದೇಶಗಳಲ್ಲಿ ನೆಪ ಹೇಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳು ಕೊರೊನಾ ನಿಯಂತ್ರಣ ಕ್ರಮಗಳ ಅನುಕರಣೆಯಲ್ಲಿ ಉತ್ತಮವಾಗಿವೆ ಎಂದರು.
ಇನ್ನು ನೆಲಮಂಗಲ ನಗರದ ಮುಖ್ಯರಸ್ತೆ, ಪೇಟೆಬೀದಿ, ಬಸ್ ನಿಲ್ದಾಣ, ತಾಲೂಕು ಕಚೇರಿ ಸೇರಿ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೂ ಜನರ ಓಡಾಟ, ಅಂಗಡಿ ಮುಚ್ಚಿರುವುದು, ಸಾಮಾಜಿಕ ಅಂತರ ಸೇರಿ ನಗರದ ವಾಸ್ತವತೆ ಬಗ್ಗೆ ರೌಂಡ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಮನೆಯಿಂದ ಹೊರಬರದಂತೆ ಖಡಕ್ ವಾರ್ನಿಂಗ್ ಕೊಟ್ಟರು…
Comments
Post a Comment