ಭಾರತೀಯ ಸೇನೆಯ ವಿಚಾರದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ ಮೋದಿ ಸರ್ಕಾರ.?ಭಾರತೀಯರಿಗೆ ಹೆಮ್ಮೆಯ ಸುದ್ದಿ.?

2019ರಲ್ಲಿ ಸೇನೆಗಾಗಿ ಖರ್ಚು ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿತ್ತು. ಮೊದಲ ಎರಡು ಸ್ಥಾನಗಳಲ್ಲಿ ಅಮೆರಿಕ ಮತ್ತು ಚೀನಾಗಳಿದ್ದವು.

2019ರಲ್ಲಿ ಒಟ್ಟು ಜಾಗತಿಕ ಸೇನಾ ವೆಚ್ಚ 1,917 ಬಿಲಿಯ ಡಾಲರ್ (ಸುಮಾರು 146 ಲಕ್ಷ ಕೋಟಿ ರೂಪಾಯಿ)ಗೆ ಏರಿತ್ತು. ಅದು 2018ರ ವೆಚ್ಚಕ್ಕೆ ಹೋಲಿಸಿದರೆ 3.6 ಶೇಕಡ ಅಧಿಕವಾಗಿತ್ತು ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎಸ್‌ಐಪಿಆರ್‌ಐ) ಸೋಮವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿದೆ. ಈ 3.6 ಶೇಕಡ ಹೆಚ್ಚಳವು ದಶಕದಲ್ಲೇ ಅತ್ಯಧಿಕ ವಾರ್ಷಿಕ ಹೆಚ್ಚಳವಾಗಿದೆ.

2019ರಲ್ಲಿ ಚೀನಾವು ಸೇನೆಗಾಗಿ 261 ಬಿಲಿಯ ಡಾಲರ್ (ಸುಮಾರು 19.88 ಲಕ್ಷ ಕೋಟಿ ರೂಪಾಯಿ) ಖರ್ಚು ಮಾಡಿದ್ದರೆ, ಭಾರತವು 71.1 ಬಿಲಿಯ ಡಾಲರ್ (ಸುಮಾರು 5.41 ಲಕ್ಷ ಕೋಟಿ ರೂಪಾಯಿ) ಖರ್ಚು ಮಾಡಿತ್ತು.

ಸೇನೆಗಾಗಿ ಅತಿ ಹೆಚ್ಚು ಖರ್ಚು ಮಾಡಿದ ಐದು ದೇಶಗಳೆಂದರೆ ಅಮೆರಿಕ, ಚೀನಾ, ಭಾರತ, ರಶ್ಯ ಮತ್ತು ಸೌದಿ ಅರೇಬಿಯ. ಈ ಐದು ದೇಶಗಳು ಮಾಡಿರುವ ವೆಚ್ಚವು ಒಟ್ಟು ವೆಚ್ಚದ 62 ಶೇಕಡವಾಗಿದೆ.

Comments