– ಯಾರುಬೇಕಾದರೂ ಸಹಾಯಕ್ಕೆ ನಿಲ್ಲಬಹುದು
ಬೆಂಗಳೂರು: ಕೋವಿಡ್-19 ಯೋಧರ ಓಡಾಟಕ್ಕೆ ನೆರವಾಗಲು ‘ಬೌನ್ಸ್’ ಬಾಡಿಗೆ ಬೈಕ್‍ಗಳ ಸಂಸ್ಥೆ ಮುಂದಾಗಿದ್ದು, ಸ್ಕೂಟರ್ ಹೀರೋ ಸೇವೆಯನ್ನು ಆರಂಭಿಸಿದೆ.
ಕೊರೊನಾ ವಾರಿಯರ್ಸ್‌ಗಳಿಗೆ ಸಹಾಯ ಮಾಡಲು ಇಚ್ಛಿಸುವವರು ಮುಂದೆ ಬರಬಹುದು ಎಂದು ಬೌನ್ಸ್ ಸಂಸ್ಥೆ ಕೇಳಿಕೊಂಡಿದೆ. ಈ ನಿಟ್ಟಿನಲ್ಲಿ ಯಾರು ಬೇಕಾದರೂ scooterhero.bounceshare.com ನಲ್ಲಿ ಸೈನ್ ಅಪ್ ಆಗಿ ತಮ್ಮ ದ್ವಿಚಕ್ರ ವಾಹನಗಳನ್ನು ಕೋವಿಡ್-19 ಬಳಕೆಗೆ ಒದಗಿಸಬಹುದು.
ಜನ ತಮ್ಮ ಬೈಕ್, ಸ್ಕೂಟರ್‌ಗಳನ್ನು ‘ಸ್ಕೂಟರ್ ಹೀರೋ’ ಪಟ್ಟಿಗೆ ಸೇರಿಸಿ, ಹಂಚಿಕೊಳ್ಳುವ ಅವಕಾಶವನ್ನು ಬೌನ್ಸ್ ಒದಗಿಸಿದೆ. ಈ ಪಟ್ಟಿಗೆ ಸೇರಿಸುವ ಪ್ರತಿಯೊಬ್ಬರು ತಮ್ಮ ಬೈಕನ್ನು ಉಚಿತವಾಗಿ ಬಳಕೆಗೆ ಕೊಡಬಹುದು. ಇಲ್ಲವೆ ದಿನಕ್ಕೆ 80 ರೂ. ಶುಲ್ಕ ವಿಧಿಸುವ ಆಯ್ಕೆಯನ್ನು ಹೊಂದಬಹುದಾಗಿದೆ. ಇದರಿಂದ ಆರ್ಥಿಕವಾಗಿ ಕುಗ್ಗಿರುವ ಸಾವಿರಾರು ಮಂದಿಗೆ, ಸುಮ್ಮನೆ ನಿಂತಿರುವ ತಮ್ಮ ವಾಹನದಿಂದ ಸ್ವಲ್ಪ ಹಣಗಳಿಸಲು ಸಹಾಯವಾಗಲಿದೆ.
ಈ ಮೂಲಕ ಕೋವಿಡ್-19 ಯೋಧರಿಗೂ ಓಡಾಡಲು ಸಹಾಯವಾಗಬಹುದು ಎಂದು ಕಂಪನಿ ಕಂಪನಿ ಅಭಿಪ್ರಾಯ ವ್ಯಕ್ತಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 99724 17454 ನಂಬರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.
Comments
Post a Comment