ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲ ಕೆಲಸಗಳು ರದ್ದಾಗಿವೆ. ಶಾಲೆ-ಕಾಲೇಜುಗಳು ಕೂಡ ಬಂದ್ ಆಗಿವೆ. ಅನೇಕ ವಿಶ್ವವಿದ್ಯಾನಿಲಯಗಳು ಪರೀಕ್ಷೆಯನ್ನು ಮುಂದೂಡಿವೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಖಾಲಿ ಕುಳಿತಿದ್ದು, ಗಳಿಕೆಗೆ ಇಂಟರ್ನೆಟ್ ನಲ್ಲಿ ಸಾಕಷ್ಟು ಅವಕಾಶವಿದೆ. ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಇಂಟರ್ನೆಟ್ ನಲ್ಲಿ ಹಣ ಗಳಿಸಬಹುದು.
ಇ-ಕಾಮರ್ಸ್ ಈಗ ಪ್ರಸಿದ್ಧಿ ಪಡೆದಿದೆ. ಆನ್ಲೈನ್ ಮೂಲಕ ವಸ್ತುಗಳ ಮಾರಾಟ. ಇದಕ್ಕೆ ಅನೇಕ ಆನ್ಲೈನ್ ಶಾಪಿಂಗ್ ಮಾಲ್ ಗಳಿವೆ. ಅವುಗಳ ವಸ್ತುಗಳನ್ನು ವಾ ಅಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ,ಗ್ರಾಹಕರಿಂದ ಆರ್ಡರ್ ಪಡೆಯುವ ಮೂಲಕ ನೀವು ಹಣ ಸಂಪಾದಿಸಬಹುದು.
ಪುಸ್ತಕ ಬರೆಯುವ ಆಸಕ್ತಿಯಿರುವವರು ಈ ಕೆಲಸ ಮಾಡಬಹುದು. ಪುಸ್ತಕ ಯಾವುದೇ ವಿಷ್ಯದ ಬಗ್ಗೆ ಇರಬಹುದು. ಪುಸ್ತಕದ ಬೇಡಿಕೆ ಹೆಚ್ಚಾದಂತೆ ನೀವು ಹೆಚ್ಚೆಚ್ಚು ಹಣ ಗಳಿಸಬಹುದು.
ಯುಟ್ಯೂಬ್ ಚಾನೆಲ್ ತೆರೆಯಬಹುದು. ಅಲ್ಲಿ ಸುಂದರ ವಿಡಿಯೋಗಳನ್ನು ಹಾಕ್ತಿರಬೇಕು. ಈ ವಿಡಿಯೋಗಳ ಕ್ಲಿಕ್ ಹೆಚ್ಚಾದಂತೆ ನಿಮಗೆ ಹಣ ಬರಲು ಶುರುವಾಗುತ್ತದೆ.
Comments
Post a Comment