3 ತಿಂಗಳು ಉಚಿತ ಸಿಲಿಂಡರ್ ಪಡೆಯಲು ಮುಖ್ಯ ಮಾಹಿತಿ: ಪಡೆಯದಿದ್ರೆ ಕೋಟಾ ಕಡಿತ




ಲಾಕ್ಡೌನ್ ಜಾರಿಯಾಗಿರುವುದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 3 ತಿಂಗಳು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡಲಿದೆ.

ಉಜ್ವಲ ಯೋಜನೆಯಡಿ ಈ ತಿಂಗಳ ಉಚಿತ ಅಡುಗೆ ಅನಿಲ ಪಡೆಯಲು ಏಪ್ರಿಲ್ 30 ಕೊನೆಯ ದಿನವಾಗಿದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಏಪ್ರಿಲ್, ಮೇ, ಜೂನ್ ತಿಂಗಳಿಗೆ ಉಚಿತವಾಗಿ ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಸಿಲಿಂಡರ್ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಏಪ್ರಿಲ್ ತಿಂಗಳ ಸಿಲಿಂಡರ್ ಪಡೆಯುವ ಉಜ್ವಲ ಯೋಜನೆ ಫಲಾನುಭವಿಗಳು ಏಪ್ರಿಲ್ 30ರೊಳಗೆ ಪಡೆಯಬೇಕು. ಇಲ್ಲವೇ ಬುಕ್ ಮಾಡಬೇಕೆಂದು ಹೇಳಲಾಗಿದೆ. ಮೇ 1 ರಿಂದ ಮೇ ತಿಂಗಳ ಕೋಟಾ ಆರಂಭವಾಗಲಿದ್ದು ಏಪ್ರಿಲ್ ತಿಂಗಳ ಕೋಟ ಪಡೆಯಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಮೇ ತಿಂಗಳ ಅಂತ್ಯದೊಳಗೆ ಸಿಲಿಂಡರ್ ಪಡೆದುಕೊಳ್ಳದಿದ್ದರೆ ಮೇ ತಿಂಗಳ ಸಿಲಿಂಡರ್ ಪಡೆಯಲು ಆಗಲ್ಲ, ಜೂನ್ ತಿಂಗಳ ಕೋಟದ ಸಿಲಿಂಡರ್ ಮಾತ್ರ ಪಡೆಯಬಹುದಾಗಿದೆ ಎನ್ನಲಾಗಿದೆ.
ಉಜ್ವಲ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 3 ತಿಂಗಳು ಉಚಿತವಾಗಿ ಸಿಲಿಂಡರ್ ಕೊಡುಗೆ ನೀಡಿದೆ. ಆದರೆ, ಇಂತಹ ನಿಬಂಧನೆಗಳನ್ನು ಹಾಕಿರುವುದರಿಂದ ಫಲಾನುಭವಿಗಳಿಗೆ ಸಮಸ್ಯೆ ಎದುರಾಗಿದೆ. ಸಿಲಿಂಡರ್ ಖಾಲಿಯಾಗದ ಕಾರಣ ಮತ್ತು ಸಿಂಗಲ್ ಸಿಲಿಂಡರ್ ಹೊಂದಿರುವ ಫಲಾನುಭವಿಗಳಿಗೆ ಸಮಸ್ಯೆಯಾಗಿದೆ ಎನ್ನಲಾಗಿದೆ. ಈ ತಿಂಗಳ ಉಚಿತ ಅಡುಗೆ ಅನಿಲ ಸಿಲಿಂಡರ್ ಪಡೆಯಲು ಏಪ್ರಿಲ್ 30 ಕೊನೆಯ ದಿನವಾಗಿದ್ದು ಗ್ರಾಹಕರು ಬುಕಿಂಗ್ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಈ ತಿಂಗಳ ಕೋಟಾ ಕಡಿತವಾಗಲಿದೆ ಎಂದು ಹೇಳಲಾಗಿದೆ.

Comments