ಸ್ಪೋಟಕ ಬ್ರೇಕಿಂಗ್: ಬೃಹತ್ ಪ್ಯಾಕೇಜ್ ಘೋಷಿಸಿದ ಹಣಕಾಸು ಸಚಿವೆ ನೀರ್ಮಲಾ ಸೀತಾರಾಮನ್.?

ದೇಶದಲ್ಲಿ ಕರೊನಾ ಸೋಂಕು ತಡೆಗಟ್ಟಲು ಪ್ರಧಾನಮಂತ್ರಿಯವರು ಘೋಷಿಸಿರುವ ಲಾಕ್​ಡೌನ್​ ಶುರುವಾಗಿ 36 ಗಂಟೆಗಳಾಗಿವೆ. ಬಡವರು, ವಲಸಿಗರು, ಮಹಿಳೆಯರು ಮತ್ತು ಇತರೆ ಶ್ರಮಿಕ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಅದೇ ರೀತಿ ಈ ಸೋಂಕು ನಿವಾರಣೆಗಾಗಿ ಹೋರಾಡುತ್ತಿರುವ ಕರೊನಾ ವಾರಿಯರ್ಸ್ ಅವರನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಘೋಷಿಸಿದೆ.

ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರೋನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿರುವ ಡಾಕ್ಟರ್ಸ್​, ಆಶಾ ಕಾರ್ಯಕರ್ತೆಯರು, ನರ್ಸ್​ಗಳು ಎಲ್ಲರಿಗೂ ಪ್ರತಿಯೊಬ್ಬರಿಗೂ ತಲಾ 50 ಲಕ್ಷರೂಪಾಯಿ ಮೌಲ್ಯದ ಮೆಡಿಕಲ್ ಇನ್ಶೂರೆನ್ಸ್ ಒದಗಿಸುತ್ತಿದ್ದೇವೆ ಎಂದು ಹೇಳಿದರು.

ಬಡವರಿಗೆ ಗರೀಬ್​ ಕಲ್ಯಾಣ್ ಅನ್ನ ಯೋಜನೆ ಘೋಷಿಸಿದ ಅವರು, 80 ಕೋಟಿ ಬಡವರು ಇದರ ಫಲಾನುಭವಿಗಳು. ಇದರಂತೆ, ಮುಂದಿನ ಮೂರು ತಿಂಗಳು ಕಾಲ ಪ್ರತಿಯೊಬ್ಬರಿಗೂ 5 ಕಿಲೋ ಅಕ್ಕಿ ಅಥವಾ 5 ಕಿಲೋ ಗೋಧಿ, ಜತೆಗೆ ಒಂದು ಕಿಲೋ ದಾಲ್​ ಕೂಡ ಸಿಗಲಿದೆ ಎಂದು ಹೇಳಿದರು.

Comments