ಇದೀಗ ಬಂದ ಸುದ್ದಿ: ಸೋಮವಾರದ ಬಳಿಕ 'ಕೆಪಿಸಿಸಿ'ಗೆ ಕಾಂಗ್ರೆಸ್ ಹೈಕಮಾಂಡ್ ಹೊಸ ಸಾರಥಿಯ ಘೋಷಣೆ.?ಅಷ್ಟಕ್ಕೂ ಯಾರು ಗೊತ್ತಾ ಆ ಸಾರಥಿ.?

ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ ಪಟ್ಟ ಯಾರಿಗೆ ಒಲಿಯಲಿದೇ ಎಂಬುದೆ ಬಿಸಿಬಿಸಿ ಚರ್ಚೆ. ಕೆಪಿಸಿಸಿ ಅಧ್ಯಕ್ಷರ ಪಟ್ಟದ ಸಾಲಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಮುಂಚೂಣಿಯಲ್ಲಿದ್ದರೇ, ಡಾ.ಜಿ.ಪರಮೇಶ್ವರ್ ಹೆಸರು ಕೂಡ ಆಗಾಗ ಕೇಳಿ ಬರುತ್ತಿದೆ. ಈ ನಡುವೆ ಸದ್ಯಕ್ಕೆ ದಿನೇಶ್ ಗುಂಡೂರಾವ್ ಅವರೇ ನೀವೇ ಮುಂದುವರೆಯಿರಿ. ಸೋಮವಾರದ ನಂತ್ರ ಹೊಸ ಅಧ್ಯಕ್ಷರ ಆಯ್ಕೆ ಬಗ್ಗೆ ಯೋಚಿಸೋಣ ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾದ ಗುಂಡೂರಾವ್ ಗೆ ಹೇಳಿದೆಯಂತೆ. ಹೀಗಾಗಿ ಸೋಮವಾರದ ಬಳಿಕ ಕೆಪಿಸಿಸಿಗೆ ಹೊಸ ಸಾರಥಿ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯಾನ ಸೋಲು ಕಂಡಿದ್ದರಿಂದಾಗಿ ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ರು.. ಇಂತಹ ಹುದ್ದೆಗೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಸುತ್ತಿದೆ. ಈ ಮಧ್ಯೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾದ ದಿನೇಶ್ ಗುಂಡೂರಾವ್ ಇದೇ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಕೂಡ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿನ ಯಾವ ಕಾಂಗ್ರೆಸ್ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರ ಪಟ್ಟಕ್ಕೆ ಕಟ್ಟಬೇಕು ಎಂಬ ಬಗ್ಗೆ ಒಮ್ಮತದ ನಿರ್ಧಾರವನ್ನು ವ್ಯಕ್ತ ಪಡಿಸದೇ.. ಸದ್ಯಕ್ಕೆ ನೀವೇ ಮುಂದುವರೆಯಿರಿ ದಿನೇಶ್ ಗುಂಡೂರಾವ್ ಅವರೇ.. ಸೋಮವಾರದ ನಂತ್ರ ಯಾರನ್ನು ನೇಮಕ ಮಾಡೋದು ಎನ್ನುವ ಬಗ್ಗೆ ಚರ್ಚಿಸಿ ತಿಳಿಸಲಾಗುತ್ತದೆ ಎಂಬುದಾಗಿ ಹೇಳಿದೆಯಂತೆ. ಹೀಗಾಗಿ ತಾತ್ಕಾಲಿಕವಾಗಿ ದಿನೇಶ್ ಗುಂಡೂರಾವ್ ಅವರೇ ರಾಜ್ಯ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಸೋಮವಾರದ ನಂತ್ರ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೆ ಯಾರನ್ನು ನೂತನ ಸಾರಥಿಯಾಗಿ ನೇಮಕ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Comments