ಇದೀಗ ಬಂದ ಸುದ್ದಿ: ಎರಡೇ ಶಬ್ದದಲ್ಲಿ ಡಿಸಿಗೆ ಖಡಕ್ ಎಚ್ಚರಿಕೆ ಕೊಟ್ಟ ಯೋಗಿ ಆದಿತ್ಯನಾಥ್.? ಅಷ್ಟಕ್ಕೂ ಹೇಳಿದ್ದೇನು ಗೊತ್ತಾ.?
ಕೊರೊನಾ ನಿಯಂತ್ರಿಸುವ ವಿಚಾರದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಳ್ಮೆ ಕಳೆದುಕೊಂಡಿದ್ದಾರೆ.
ನೋಯ್ಡಾ ಜಿಲ್ಲಾಡಳಿತದ (ಗೌತಂ ಬುದ್ದ ನಗರ) ವಿರುದ್ದ ಸಿಕ್ಕಾಪಟ್ಟೆ ಗರಂ ಆಗಿರುವ ಯೋಗಿ, 'ಸುಧರ್ ಜಾವೋ' ಎನ್ನುವ ಕೊನೆಯ ವಾರ್ನಿಂಗ್ ಅನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ. ಖಾಸಗಿ ಸಂಸ್ಥೆಯ ಮೇಲೆ ಕ್ರಮ ತೆಗೆದುಕೊಳ್ಳದೇ ಇರುವುದು ಯೋಗಿ ಸಿಟ್ಟಿಗೆ ಕಾರಣ.
ಕೋವಿಡ್ 19 ಪರಿಶೀಲನಾ ಸಭೆಯಲ್ಲಿ ಜಿಲ್ಲಾಡಳಿತದ ಕ್ರಮವನ್ನು ಸಮರ್ಥಿಸಲು ಮುಂದಾದ ಮ್ಯಾಜಿಸ್ಟ್ರೇಟ್ ಬಿ.ಎನ್.ಸಿಂಗ್ ಅವರನ್ನು ಶಟ್ ಅಪ್ ಎಂದು ಯೋಗಿ ಆದಿತ್ಯನಾಥ್ ಸುಮ್ಮನಾಗಿಸಿದ್ದಾರೆ.
ನೋಯ್ಡಾದ ಖಾಸಗಿ ಭದ್ರತಾ ಸಂಸ್ಥೆಯಲ್ಲಿನ 25 ಉದ್ಯೋಗಿಗಳಿಗೆ ಕೋವಿಡ್ 19 ಸೋಂಕು ಕಾಣಿಸಿತ್ತು. ಆದರೆ, ಸಂಸ್ಥೆಯ ವಿರುದ್ದ ಯಾವುದೇ ವಿಚಾರಣೆ ಅಥವಾ ಮಾಹಿತಿಯನ್ನು ಜಿಲ್ಲಾಡಳಿತ ಪಡೆದುಕೊಂಡಿರಲಿಲ್ಲ.
"ಜಿಲ್ಲಾಡಳಿತದ ಮೂಗಿನ ನೇರಕ್ಕೆ ಇಂತಹ ಘಟನೆ ನಡೆದರೂ ಯಾಕೆ ಸುಮ್ಮನಾಗಿದ್ದೀರಾ? ಆ ಸಂಸ್ಥೆ ಪ್ರಮುಖವಾದ ಮಾಹಿತಿಯನ್ನು ಮುಚ್ಚಿಟ್ಟಿದ್ದು ಯಾಕೆ? ಈ ಕೂಡಲೇ ಆ ಸಂಸ್ಥೆಯ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಲಬೇಕು. ಬರೀ FIR ಹಾಕಿ ಸುಮ್ಮನಾಗುವುದಲ್ಲ" ಎನ್ನುವ ಎಚ್ಚರಿಕೆಯನ್ನು ಯೋಗಿ ಆದಿತ್ಯನಾಥ್ ನೀಡಿ, ಬಿ.ಎನ್.ಸಿಂಗ್ ಅವರನ್ನು ಎತ್ತಂಗಡಿ ಮಾಡಿದ್ದಾರೆ.
ಇವರ ಜಾಗಕ್ಕೆ ಐಎಎಸ್ ಅಧಿಕಾರಿ ಎಲ್.ವೈ.ಸುಹಾಸ್ ಅವರನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ರಿಪೋರ್ಟ್ ಮಾಡಿಕೊಳ್ಳಲು ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಸುಹಾಸ್, ಪ್ರಯಾಗರಾಜ್ ನಲ್ಲಿ ಯಶಸ್ವಿಯಾಗಿ ಮುಗಿದಿದ್ದ ಕುಂಭಮೇಳದ ವೇಳೆ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದರು.
Comments
Post a Comment