ಸ್ಪೋಟಕ ಬ್ರೇಕಿಂಗ್: ಮತ್ತೊಂದು ಐತಿಹಾಸಿಕ ಘೋಷಣೆಗೆ ಸಜ್ಜಾದ ಪ್ರಧಾನಿ ನರೇಂದ್ರ ಮೋದಿ.?


ಕೊರೊನಾವೈರಸ್‌ನಿಂದಾಗಿ ದೇಶವ್ಯಾಪಿ 21 ದಿನಗಳ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಉದ್ಯಮಗಳಿಗೂ ಭಾರೀ ಪೆಟ್ಟು ಬಿದ್ದಿದ್ದು ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಲಿದೆ. ಹೀಗಾಗಿ ಜನರಿಗೆ ಹಾಗೂ ದೇಶದ ಆರ್ಥಿಕತೆಗೆ ರಿಲೀಫ್ ನೀಡಲು ಕೇಂದ್ರ ಸರ್ಕಾರದ ಸದ್ಯದಲ್ಲೇ 1.5 ಲಕ್ಷ ಕೋಟಿ ರುಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.

ಕೊರೊನಾವೈರಸ್‌ನಿಂದಾಗಿ ಆರ್ಥಿಕ ಹಾನಿಯನ್ನು ತಗ್ಗಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ 1.5 ಟ್ರಿಲಿಯನ್ ಮೌಲ್ಯದ ಪ್ಯಾಕೇಜ್‌ ಘೋಷಿಸಲು ಯೋಜನೆ ನಡೆಸುತ್ತಿದೆ.

ಪ್ಯಾಕೇಜ್ ಮೂರು ಹಂತದ ಮೂಲಕ ವ್ಯವಹಾರಗಳು ಮತ್ತು ವ್ಯಕ್ತಿಗಳ ಹಣದ ಹರಿವಿನ ಸಮಸ್ಯೆಯನ್ನು ನಿಭಾಯಿಸಲು ಪ್ರಯತ್ನಿಸುತ್ತದೆ. ಇದರಲ್ಲಿ ದೈನಂದಿನ ಕೂಲಿ ಕಾರ್ಮಿಕರಿಗೆ ನಗದು ವರ್ಗಾವಣೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆದಾಯದ ನಷ್ಟವನ್ನು ಸರಿದೂಗಿಸುವುದು ಮತ್ತು ವ್ಯಕ್ತಿಗಳ ಅಡಮಾನ ಮತ್ತು ವಾಹನ ಸಾಲಗಳನ್ನು ರಕ್ಷಿಸುವುದು ಒಳಗೊಂಡಿರುತ್ತದೆ.
ಪ್ಯಾಕೇಜ್‌ನ ವಿವರಗಳಲ್ಲಿ ನಗದು ವರ್ಗಾವಣೆಯಲ್ಲಿ 50,000 ಕೋಟಿ ರುಪಾಯಿ , ವೇತನ ಬೆಂಬಲ 50,000 ಕೋಟಿ ರುಪಾಯಿ ಮತ್ತು ಇಎಂಐ ಮುಂದೂಡಲ್ಪಟ್ಟವರಿಗೆ ಹೆಚ್ಚುವರಿ 65,000 ಕೋಟಿ ರುಪಾಯಿ ಆಗಿದೆ. ಈ ರೀತಿಯಾಗಿ ಯೋಜನೆಗಳ ವಿವರಗಳನ್ನು ರೂಪಿಸಲಾಗುತ್ತಿದೆ ಮತ್ತು ಪ್ರಕಟಣೆಗಳ ಮೂಲಕ ಸರ್ಕಾರವು ಇದನ್ನು ತಿಳಿಸುವ ಸಾಧ್ಯತೆ ಇದೆ.


'' ಹಣಕಾಸಿನ ಪ್ಯಾಕೇಜ್ ಶನಿವಾರ ಇಲ್ಲವೇ ಅದಕ್ಕೂ ಮೊದಲೇ ಬರಬೇಕು. ಮುಂಬರುವ ವಾರಗಳಲ್ಲಿ ಸರ್ಕಾರವು ಅನೇಕ ಪ್ಯಾಕೇಜ್‌ಗಳನ್ನು ಘೋಷಿಸಬಹುದು ಅಥವಾ ಮೊದಲ ಮತ್ತು ಎರಡನೆಯ ಭಾಗವನ್ನು ಒಂದು ಪ್ರಸ್ತಾವನೆಯಲ್ಲಿ ಸಂಯೋಜಿಸಬಹುದು ಮತ್ತು ಉಳಿದವುಗಳನ್ನು ನಂತರದವರೆಗೆ ಇಡಬಹುದು "ಎಂದು ಮೂಲವೊಂದು ತಿಳಿಸಿದೆ.

ಇನ್ನೊಂದು ಮೂಲಗಳ ಪ್ರಕಾರ 21 ದಿನಗಳ ಲಾಕ್‌ಡೌನ್‌ನ ಪರಿಣಾಮವಾಗಿ ಆರ್ಥಿಕತೆಗೆ ಆಗುವ ಹಾನಿಯನ್ನು ಪರಿಹರಿಸಲು ಪ್ಯಾಕೇಜ್ ಅನ್ನು ಮೊದಲು ಘೋಷಿಸಲಾಗುವುದು ಎಂದು ತಿಳಿಸಿವೆ. ಎರಡನೆಯ ಹಂತದ ಆರ್ಥಿಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಅದನ್ನು ನಂತರ ಘೋಷಿಸುವ ಸಾಧ್ಯತೆಯಿದೆ ಎಂದು ಈ ಮೂಲ ತಿಳಿಸಿದೆ.

Source: Oneindia

Comments