ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವು ನೀಡಿದ ಹೆಚ್.ವಿಶ್ವನಾಥ್ ಅವರಿಗೆ ಮಂತ್ರಿಗಿರಿ ಸಿಗುವ ಲಕ್ಷಣಗಳು ಕಡಿಮೆಯಾಗಿವೆ. ರಾಜ್ಯ ವಿಧಾನಮಂಡಲ ಅಧಿವೇಶನ ಮುಗಿದ ನಂತರ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಮಾಡಲಿದ್ದು ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಅವರನ್ನು ಮಂತ್ರಿಗಳನ್ನಾಗಿ ಮಾಡಲಿದ್ದಾರೆ.
ಆದರೆ ಹೆಚ್.ವಿಶ್ವನಾಥ್ ಅವರಿಗೆ ಜೂನ್ ತಿಂಗಳವರೆಗೆ ಕಾಯುವಂತೆ ಯಡಿಯೂರಪ್ಪ ಸೂಚಿಸಿದ್ದು ಆದರೆ ಜೂನ್ ಕಳೆದರೂ ವಿಶ್ವನಾಥ್ ಅವರಿಗೆ ಮಂತ್ರಿಗಿರಿ ಸಿಗುವುದು ಡೌಟ್. ಜೂನ್ ತಿಂಗಳಲ್ಲಿ ವಿಶ್ವನಾಥ್ ಅವರನ್ನು ವಿಧಾನಪರಿಷತ್ ಚುನಾವಣೆಗೆ ನಿಲ್ಲಿಸಿ,ಗೆಲ್ಲಿಸಿಕೊಂಡು ಬರುವುದು ಬಹುತೇಕ ಪಕ್ಕಾ ಆಗಿದ್ದರೂ ಮಂತ್ರಿಗಿರಿಯ ವಿಷಯದಲ್ಲಿ ಯಡಿಯೂರಪ್ಪ ಆಸಕ್ತಿಯನ್ನೇ ತೋರುತ್ತಿಲ್ಲ.
ಇದ್ದಕ್ಕಿದ್ದಂತೆ ವಿಶ್ವನಾಥ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಷಯದಲ್ಲಿ ಯಡಿಯೂರಪ್ಪ ಅವರು ನಿರಾಸಕ್ತಿ ತಳೆದಿರುವುದು ಸರ್ಕಾರ ರಚನೆಗೆ ಕಾರಣರಾದ ಗುಂಪಿನ ಹಲವು ಅನುಮಾನಗಳನ್ನು ಮೂಡಿಸಿದೆ. ರಾಜಕೀಯವಾಗಿ ಸಿದ್ಧರಾಮಯ್ಯ ಅವರ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೃದು ಧೋರಣೆ ಹೊಂದಿರುವುದು ಈ ಅನುಮಾನಗಳಿಗೆ ಮುಖ್ಯ ಕಾರಣ.
ಯಡಿಯೂರಪ್ಪ ಅವರು ತಮ್ಮ ಸರ್ಕಾರಕ್ಕೆ ಯಾವ ತೊಂದರೆಗಳೂ ಇಲ್ಲದಂತೆ ನೋಡಿಕೊಳ್ಳಲು ಬಯಸಿದ್ದಾರೆ.ಹೀಗಾಗಿ ಸಿದ್ಧರಾಮಯ್ಯ ಅವರನ್ನು ರಾಜಕೀಯವಾಗಿ ದ್ವೇಷಿಸುವ ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಅವರಿಗೀಗ ಇಷ್ಟವಿಲ್ಲ ಎಂಬುದು ಈ ಗುಂಪಿನ ಅನುಮಾನ. ಇದಕ್ಕೆ ಪುಷ್ಟಿ ನೀಡುವಂತೆ ಆ ಗುಂಪಿನ ಪ್ರಮುಖರು:ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮ್ಮ ಜತೆ ಕೈ ಜೋಡಿಸಿದ್ದ ಕಾಂಗ್ರೆಸ್ ಜತೆಗಿನ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಲು ಕುಮಾರಸ್ವಾಮಿ ಕೂಡಾ ವಿಶ್ವನಾಥ್ ಅವರನ್ನು ಸಂಪುಟದಿಂದ ದೂರವಿಟ್ಟಿದ್ದರು ಎನ್ನುತ್ತಾರೆ.
ಕಾಂಗ್ರೆಸ್‍ನಲ್ಲಿ ಸಿದ್ಧರಾಮಯ್ಯ ನಿರ್ವಿವಾದ ನಾಯಕರಾಗಿದ್ದುದರಿಂದ ಅವರ ರಾಜಕೀಯ ಎದುರಾಳಿ ವಿಶ್ವನಾಥ್ ಅವರಿಗೆ ಮಂತ್ರಿಗಿರಿ ನೀಡುವುದು ಅಪಾಯಕಾರಿ ಎಂದು ಕುಮಾರಸ್ವಾಮಿ ಬಾವಿಸಿದ್ದರು.ಇದೇ ಕಾರಣಕ್ಕಾಗಿ ಹದಿನಾಲ್ಕು ತಿಂಗಳ ಆಡಳಿತಾವಧಿಯಲ್ಲಿ ವಿಶ್ವನಾಥ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಿಲ್ಲ. ಈಗ ಯಡಿಯೂರಪ್ಪ ಅವರ ಸರದಿ.ಅವರು ಕೂಡಾ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಮನಸ್ಸಿಗೆ ಕಸಿವಿಸಿಯುಂಟು ಮಾಡಲು ತಯಾರಿಲ್ಲ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ತಮ್ಮ ಹುಟ್ಟು ಹಬ್ಬದ ಸಮಾರಂಭಕ್ಕೆ ಬಂದ ಸಿದ್ಧರಾಮಯ್ಯ ಅವರು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿರುವಾಗ ವಿಶ್ವನಾಥ್ ಅವರನ್ನು ಮಂತ್ರಿ ಮಾಡಿ ಅವರಿಗೇಕೆ ಮುಜುಗರವುಂಟು ಮಾಡಬೇಕು ಎಂಬುದು ಯಡಿಯೂರಪ್ಪ ಅವರ ಯೋಚನೆ. ಹೀಗಾಗಿ ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂದಂತೆ ಸಿದ್ಧರಾಮಯ್ಯ ಅವರ ಜತೆಗಿನ ವಿರಸದಿಂದಾಗಿ ಹೆಚ್.ವಿಶ್ವನಾಥ್ ಅವರಿಗೂ ಮಂತ್ರಿಗಿರಿ ಸಿಗುವುದು ಡೌಟು ಎಂಬುದು ಈ ಗುಂಪಿನ ವಾದ.

Comments
Post a Comment