ಇದೀಗ ಬಂದ ಸುದ್ದಿ: ಉಪಸಭಾಪತಿ ಸ್ಥಾನಕ್ಕೆ ಬಿಜೆಯಿಂದ ಹೊಸ ಹೆಸರು ಘೋಷಿಸಿದ ರಾಜ್ಯ ಸರ್ಕಾರ.?ಬೆಚ್ಚಿಬಿದ್ದ ವಿಪಕ್ಷಗಳು.?

ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತ್ರ, ಮೈತ್ರಿ ಸರ್ಕಾರದ ಅವಧಿಯಲ್ಲಿಯೇ ಉಪ ಸಭಾಧ್ಯಕ್ಷರಾಗಿದ್ದಂತ ಕೃಷ್ಣಾ ರೆಡ್ಡಿಯವರನ್ನು ಮುಂದುವರೆಸಲಾಗಿತ್ತು. ಆದ್ರೇ ಬಿಜೆಪಿಯ ಮತ್ತೊಬ್ಬ ಶಾಸಕರಿಗೆ ಈ ಸ್ಥಾನ ನೀಡುವ ಸಲುವಾಗಿ ಬಿಜೆಪಿ ಉಪ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿತ್ತು. ಈ ಹಿನ್ನಲೆಯಲ್ಲಿ ಜೆಡಿಎಸ್ ನ ಕೃಷ್ಣಾ ರೆಡ್ಡಿಯವರು ವಿಧಾನಸಭೆಯ ಉಪ ಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ ಎನ್ನುವಂತೆ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದಂತ ಕೃಷ್ಣಾರೆಡ್ಡಿಯವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕ ಮುಖ್ಯ ಕಾರಣ, ಆಡಳಿತಾರೂಢ ಬಿಜೆಪಿ ಸರ್ಕಾರ ತಮ್ಮದೇ ಪಕ್ಷದ ವ್ಯಕ್ತಿಯೊಬ್ಬರನ್ನು ಈ ಸ್ಥಾನಕ್ಕೆ ನೇಮಕ ಮಾಡಲು ಮುಂದಾಗಿತ್ತು. ಇದೇ ಕಾರಣದಿಂದಾಗಿ ಉಪ ಸಭಾಧ್ಯಕ್ಷರಾಗಿದ್ದಂತ ಕೃಷ್ಣಾ ರೆಡ್ಡಿಯವರನ್ನು ಅವಿಶ್ವಾಸ ನಿರ್ಣಯದ ಮೂಲಕ ಕೆಳಗೆ ಇಳಿಸಿ, ಉತ್ತರ ಕರ್ನಾಟಕ ಮೂಲಕ ಶಾಸಕರೊಬ್ಬನ್ನು ಈ ಸ್ಥಾನಕ್ಕೆ ನೇಮಕ ಮಾಡಲು ಮುಂದಾಗಿತ್ತು.

ಈ ಹಿನ್ನಲೆಯಲ್ಲಿ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡಿಸಿ, ತಾವು ಕೆಳಗಿಳಿಯುವ ಮೊದಲೇ ವಿಧಾನಸಭೆಯ ಉಪಾಧ್ಯಕ್ಷರಾದಂತ ಜೆಡಿಎಸ್ ನ ಕೃಷ್ಣಾ ರೆಡ್ಡಿಯವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಉಪಾಧ್ಯಕ್ಷರ ಸ್ಥಾನದಿಂದ ಹೊರ ಬಂದಿದ್ದಾರೆ.

Comments