ಒಂದೆಡೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ 15 ವಿಧಾನಸಭಾ ಉಪ ಚುನಾವಣೆಯ ಕ್ಷೇತ್ರಗಳಲ್ಲಿ ತಾವು ಗೆಲುವನ್ನು ಸಾಧಿಸುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಜೊತೆ ಜೊತೆಗೆ ಗೆದ್ದಂತ ಬಿಜೆಪಿಯ ಶಾಸಕರನ್ನು ಮಂತ್ರಿಮಾಡುವುದಾಗಿಯೂ ಘೋಷಣೆ ಮಾಡುತ್ತಿದ್ದಾರೆ. ಆದ್ರೇ ಉಪ ಚುನಾವಣೆಯ ಬಗ್ಗೆ ಆಂತರೀಕ ಸಮೀಕ್ಷೆಯ ಫಲಿತಾಂಶವೇ ಬೇರೆಯಾಗಿದೆ. ಈ ಮೂಲತ ಸಿಎಂ ಯಡಿಯೂರಪ್ಪ ಅವರಿಗೆ ಶಾಕ್ ನೀಡಿ, ಬೆಚ್ಚಿ ಬೀಳುವಂತೆ ಮಾಡಿದೆ.
ಹೌದು… ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉಪ ಚುನಾವಣೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 8 ಕ್ಷೇತ್ರಗಳಲ್ಲಿ ಆದರೂ ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದವರಂತೆ ಪ್ರಚಾರಕ್ಕೆ ಇಳಿದಿದ್ದಾರೆ. ಆದರ ಜೊತೆ ಜೊತೆಗೆ ಗೆದ್ದ ಶಾಸಕರನ್ನು ಮಂತ್ರಿ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಉಪ ಚುನಾವಣೆಯ ಬಳಿಕ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ.
ಇದರ ಜೊತೆ ಜೊತೆಗೆ, ಬಿಜೆಪಿಗೆ ಕನಿಷ್ಠ 8-10 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಂತೂ ಇತ್ತು. ಗೋಕಾಕ್, ಹುಣಸೂರು, ಹೊಸಕೋಟೆ, ರಾಣೆಬೆನ್ನೂರು, ಕೆ ಆರ್ ಪೇಟೆ, ಚಿಕ್ಕಬಳ್ಳಾಪುರ, ಯಶವಂತಪುರ ಕ್ಷೇತ್ರಗಳ್ಲಲಿ ಬಿಜೆಪಿ ಗೆಲುವ ಕಷ್ಟ ಎಂಬುದಾಗಿ ಆತಂರೀಕ ಸಮೀಕ್ಷೆಯ ಫಲಿತಾಂಶ ಹೇಳುತ್ತಿದೆ. ಇದಲ್ಲದೇ 105 ಸ್ಥಾನ ಹೊಂದಿರುವ ಬಿಜೆಪಿಗೆ ಉಪ ಚುನಾವಣೆಯಲ್ಲಿ ಅಗತ್ಯ ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಹೊಸಕೋಟೆ, ವಿಜಯನಗರದಲ್ಲಿ ಬಿಜಿಪಿಯ ಬಂಡಾಯ ಅಭ್ಯರ್ಥಿಗಳನ್ನು ಸಂಭಾಳಿಸುವುದರಲ್ಲಿ ವಿಫಲರಾಗಿದ್ದು, ಈ ಕ್ಷೇತ್ರಗಳೂ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ.
ಇದೇ ಕಾರಣದಿಂದಾಗಿ ಉಪ ಚುನಾವಣೆಯಲ್ಲಿ ಹುತ್ತ ಕ್ಷೇತ್ರಗಳಲ್ಲಿ ಗೆಲ್ಲದಿದ್ದರೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಸಂಚಕಾರ ಬರಲಿದೆ. ಹೀಗಾಗಿ ತಮ್ಮ ತಾವು ರಾಜೀನಾಮೆ ಕೊಡದೇ ವಿಧಿಯಿಲ್ಲ ಎಂಬುದಾಗಿ ಸ್ವತಹ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಸಮುದಾಯದ ಮುಖಂಡರಲ್ಲಿ ಹೇಳಿಕೊಂಡಿದ್ದಾರಂತೆ. ಅಲ್ಲದೇ ಮಠಾಧೀಶರು ಧಾವಿಸಿ, ತಮಗೆ ನರೆವಾಗುವಂತೆ ಕೋರಿಕೊಂಡಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಈ ಎಲ್ಲಾ ಕಾರಣದಿಂದಾಗಿ ಉಪ ಚುನಾವಣೆಯ ಆಂತರೀಕ ಸಮೀಕ್ಷೆಯ ರಿಸ್ಟ್ ನಿಂದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಚಿಂತೆಗೆ ದೂಡಿದ್ದು, ಉಪ ಚುನಾವಣೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಬೇಕಿರುವ ಅಗತ್ಯ ಸೀಟುಗಳನ್ನು ಗೆಲ್ಲುವುದಕ್ಕಾಗಿ ತಂತ್ರ ಪ್ರತಿತಂತ್ರವನ್ನು ಹೆಣೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾವೇ ಮುಂದೆನಿಂತು ಚುನಾವಣಾ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ. ಆದ್ರೇ ಆನಂತರೀಕ ಸಮೀಕ್ಷೆಯ ರಿಸ್ಟ್ ಸತ್ಯವಾಗುತ್ತೋ ಅಥವಾ ಸುಳ್ಳಾಗುತ್ತೋ ಎಂಬುದನ್ನು ಉಪ ಚುನಾವಣೆಯ ಫಲಿತಾಂಶದ ನಂತ್ರ ಗೊತ್ತಾಗಲಿದೆ.
Comments
Post a Comment