ಬಿಜೆಪಿ ಸರ್ಕಾರಕ್ಕೆ ಖಡಕ್ ಪಂಚ್ ಕೊಟ್ಟ ಕುಮಾರಸ್ವಾಮಿ ಆಪ್ತ ಹಾಗೂ ಜೆಡಿಎಸ್ ನ ಮಾಜಿ ಸಚಿವ.?

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೇಳೆ ಮಾಜಿ ಸಚಿವ, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ತಮ್ಮ ಅಸಮಾಧಾನವನ್ನು ಹೊರಹಾಕಿ ದಸರಾ ಪಾಸ್ ನ್ನು ವಾಪಾಸ್ ಕಳುಹಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೈಸೂರು ಜಿಲ್ಲೆಗೆ ಬಿಡುಗಡೆಯಾಗಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿತ್ತು. ಈ ಮಧ್ಯೆ, ಬಿಜೆಪಿ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಮೈತ್ರಿ ಅಪವಿತ್ರ ಮೈತ್ರಿ ಎಂದು ಪದೇ ಪದೇ ಹೇಳುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ಸಾ.ರಾ.ಮಹೇಶ್ ಅವರು ದಸರಾ ಸಂಬಂಧಿತ ಕಾರ್ಯಕ್ರಮಗಳಿಂದ ದೂರು ಉಳಿದಿದ್ದರು.

ಈ ಮಧ್ಯೆ, ಮೈಸೂರು ಜಿಲ್ಲಾಡಳಿತ ದಸರಾ ಮಹೋತ್ಸವದ ವೇಳೆ ಶಾಸಕರಿಗೆ ನೀಡುವ ಪಾಸ್ ಗಳನ್ನು ಸಾ.ರಾ.ಮಹೇಶ್ ಅವರಿಗೂ ಕಳುಹಿಸಿತ್ತು. ಆದರೆ, ಸಾ.ರಾ.ಮಹೇಶ್ ಜಿಲ್ಲಾಡಳಿತಕ್ಕೆ ಪತ್ರವನ್ನು ಬರೆದು ಪಾಸ್ ನ್ನು ಹಿಂದಿರುಗಿಸಿದ್ದಾರೆ. ಅಲ್ಲದೇ, ಯಾವುದೇ ಪಾಸ್ ಗಳನ್ನು ಕಳುಹಿಸದಂತೆ ಸೂಚಿಸಿದ್ದಾರೆ…

Comments