ಇದೀಗ ಬಂದ ಸುದ್ದಿ: ರಾಜೀನಾಮೆಗೆ ಸಿದ್ದವಾದ ಕರ್ನಾಟಕದ ಪ್ರಭಾವಿ ಬಿಜೆಪಿ ಹಾಲಿ ಸಂಸದ.? ಕಾಂಗ್ರೆಸ್ ಗೆ ಸೇರ್ಪಡೆ ಸಾಧ್ಯತೆ.?
ನೆರೆಯಿಂದ ತತ್ತರಿಸುವ ಉತ್ತರ ಕರ್ನಾಟಕವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿರುವುದರ ವಿರುದ್ಧ ಬಿಜೆಪಿ ಶಾಸಕರು, ಸಂಸದರೇ ಸಿಡಿದೆದ್ದಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿದ ಬೆನ್ನಲ್ಲಿ ಈಗ ಬಿಜೆಪಿ ಸಂಸದ ಜಿ.ಎಂ.ಸಿದ್ಧೇಶ್ವರ ಅವರೂ ಸಹ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದು ವಿಳಂಬವಾಗಿದೆ, ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ' ಎಂದು ಹೇಳಿದ್ದಾರೆ. ಪ್ರವಾಹ ನಷ್ಟ ಅಂದಾಜು ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವುದು ಗೊತ್ತಿಲ್ಲ, ಆದರೆ ಪರಿಹಾರ ನೀಡದೇ ಹೋದರೆ ರಾಜೀನಾಮೆ ನೀಡುವುದು ಖಂಡಿತ ಎಂದು ಸಿದ್ದೇಶ್ವರ ಅವರು
ಹೇಳಿದರು.
ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡುವಂತೆ, ರಾಜ್ಯದ ಎಲ್ಲ ಸಂಸದರು, ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ, ಇನ್ನು ಮೂರು ದಿನಗಳ ಒಳಗಾಗಿ ಎಲ್ಲ ರಾಜ್ಯಗಳಿಗೆ ಪರಿಹಾರ ಬಿಡುಗಡೆ ಆಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. 'ಸಿದ್ದರಾಮಯ್ಯ ಅವರು ರಾಜೀನಾಮೆ ಕೇಳಿರುವುದು ಸಹಜ, ಆದರೆ ಅವರು ಕೇಳಿದ ತಕ್ಷಣ ಕೊಡಲು ಆಗುತ್ತದೆಯೇ? ನಾವು ಅವರ ಸ್ಥಾನದಲ್ಲಿದ್ದಾಗ ನಾವೂ ಅದನ್ನೇ ಮಾಡಿದ್ದೇವೆ' ಎಂದು ಅವರು ಹೇಳಿದರು.

Comments
Post a Comment