ಸ್ಪೋಟಕ ಬ್ರೇಕಿಂಗ್: ಮತ್ತೋರ್ವ ಪ್ರಭಾವಿ ಮಹಿಳೆಗೆ ಟೀಕೆಟ್ ಮಾಡಿದ ಬಿಜೆಪಿ, ಅಷ್ಟಕ್ಕೂ ಯಾರು ಗೊತ್ತಾ ಆ ಪ್ರಭಾವಿ ಮಹಿಳೆ.?

ಬಿಜೆಪಿಯು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ತನ್ನ ಅಭ್ಯರ್ಥಿಗಳ ನಾಲ್ಕನೆಯ ಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ. ಆದರೆ ಮಾಜಿ ಸಚಿವರಾದ ಏಕನಾಥ್ ಖಡ್ಸೆ,ವಿನೋದ ತಾವ್ಡೆ ಮತ್ತು ಪ್ರಕಾಶ ಮೆಹತಾ ಅವರ ಹೆಸರುಗಳು ಈ ಪಟ್ಟಿಯಲ್ಲಿಲ್ಲ. ಖಡ್ಸೆ ಒಮ್ಮೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಎರಡನೇ ಅತ್ಯಂತ ಪ್ರಬಲ ನಾಯಕರಾಗಿದ್ದರು. ಆದರೆ ಪಕ್ಷವು ಅವರ ಪುತ್ರಿ ರೋಹಿಣಿ ಖಡ್ಸೆಯವರನ್ನು ಮುಕ್ತಾಯಿನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಖಡ್ಸೆ ಮತ್ತು ಮೆಹತಾ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದ್ದಾರೆ.ದೇವೆಂದ್ರ ಫಡ್ನವೀಸ್ ನೇತೃತ್ವದ ಸರಕಾರದಿಂದ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ 2016ರಲ್ಲಿ ಖಡ್ಸೆ ಕಂದಾಯ ಸಚಿವರ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದೇ ವೇಳೆ ತಾನು ಶರದ ಪವಾರ್ ಅವರ ಎನ್‌ಸಿಪಿಗೆ ಸೇರುವ ವರದಿಗಳನ್ನು ನಿರಾಕರಿಸಿರುವ ಖಡ್ಸೆ,ಕಳೆದೊಂದು ವರ್ಷದಿಂದ ತಾನು ಪವಾರ್ ಅವರನ್ನು ಭೇಟಿಯಾಗಿಲ್ಲ,ಅವರೊಂದಿಗೆ ಮಾತುಕತೆಯನ್ನೂ ನಡೆಸಿಲ್ಲ. ತಾನು ಎನ್‌ಸಿಪಿ ಸೇರುವ ವದಂತಿಯನ್ನು ಅವರೇಕೆ ಹರಡುತ್ತಿದ್ದಾರೋ ಗೊತ್ತಿಲ್ಲ. ಬಿಜೆಪಿ ತನಗೆ ಯಾವ ಹೊಣೆಗಾರಿಕೆ ನೀಡುತ್ತದೆ ಎನ್ನುವುದು ತನಗೆ ಗೊತ್ತಿಲ್ಲ,ಆದರೆ ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಖಡ್ಸೆ ಈಗಾಗಲೇ ವಿಧಾನಸಭಾ ಚುನಾವಣೆಗಾಗಿ ತನ್ನ ನಾಮಪತ್ರವನ್ನು ಸಲ್ಲಿಸಿದ್ದಾರಾದರೂ ಅದನ್ನು ಹಿಂದೆಗೆದುಕೊಳ್ಳುವ ಸಾಧ್ಯತೆಯಿದೆ.
ತನ್ನ ಆರೋಗ್ಯವು ಸರಿಯಾಗಿದ್ದರೆ ತಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಗುರುವಾರ ಹೇಳಿದ್ದರು. 288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ ಅ.21ರಂದು ಚುನಾವಣೆ ನಡೆಯಲಿದೆ.

Comments