ಇದೀಗ ಬಂದ ಸುದ್ದಿ: ಅಭಿಮಾನಿಗಳಿಗೆ ಮತ್ತೊಂದು ಆಭಯ ನೀಡಿದ ಡಿ ಕೆ ಶಿ, ಅಷ್ಟಕ್ಕೂ ಹೇಳಿದ್ದೇನು ಗೊತ್ತಾ.?

ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಅವರಿಗೆ ಅಕ್ಟೋಬರ್ 15ರವರೆಗೂ ತಿಹಾರ್ ಜೈಲಿನಲ್ಲೇ ಇರಬೇಕಾದ ಸನ್ನಿವೇಶ ನಿರ‍್ಮಾಣವಾಗಿದೆ. ನವದೆಹಲಿಯ ಇಡಿ ವಿಶೇಷ ನ್ಯಾಯಾಲಯ, ಡಿ. ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 15ರವರೆಗೂ ಮುಂದೂಡಿದೆ. ಇದೇ ವೇಳೆ ಜಾರಿ ನಿರ್ದೇಶನಾಲಯ ಡಿಕೆಶಿ ವಿಚಾರಣೆ ನಡೆಸಲು ಇನ್ನೆರಡು ದಿನ ಕಾಲಾವಕಾಶವನ್ನೂ ನೀಡಿದೆ.

ಇಂದು ವಾದ ಮಂಡನೆ ಮಾಡಿದ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್, ವಿಚಾರಣೆ ಇನ್ನೂ ಬಾಕಿ ಇದೆ. ಡಿಕೆಶಿ ಆಸ್ಪತ್ರೆಯಲ್ಲಿ ಇದ್ದುದ್ದರಿಂದ ವಿಚಾರಣೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ನಮ್ಮ ಕಸ್ಟಡಿಗೆ ನೀಡಿ ಎಂದು ಮನವದಿ ಮಾಡಿಕೊಂಡರು

ಇದೇ ವೇಳೆ ಡಿಕೆಶಿ ಪರ ವಕೀಲರು ಪ್ರತಿವಾದ ಮಂಡಿಸಿದ್ದು, ವಿಚಾರಣೆಗೆ ಡಿಕೆಶಿ ಸಹಕರಿಸಿದ್ದಾರೆ ನ್ಯಾಯಾಂಗ ಬಂಧನ ವೇಳೆ ಕುಟುಂಬಸ್ಥರ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಡಿ ಇದಲ್ಲದೇ ಅವರಿಗೆ ಜೈಲಿಗೆ ಓದಲು ಪುಸ್ತಕವನ್ನು ಕೊಡಿ ಎಂದು ಡಿಕೆಶಿ ಪರ ವಕೀಲರು ಮತ್ತೊಂದು ಮನವಿಯನ್ನು ನ್ಯಾಯಮೂರ್ತಿಗಳು ಮುಂದಿಟ್ಟರು. ಇದೇ ವೇಳೆ ನ್ಯಾಯಾಪೀಠ ಜಾರಿ ನಿರ್ದೇಶನಾಲಯ ಡಿಕೆಶಿ ವಿಚಾರಣೆ ನಡೆಸಲು ಇನ್ನೆರಡು ದಿನ ಕಾಲಾವಕಾಶವನ್ನೂ ನೀಡಿ, ಡಿ. ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 15ರವರೆಗೂ ಮುಂದೂಡಿದೆ.

Comments