ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಿಗೆ ಸೆಪ್ಟೆಂಬರ್ 17ರಂದು ದೆಹಲಿಗೆ ಬರದಂತೆ ಸಂಸದ ಡಿ. ಕೆ. ಸುರೇಶ್ ಮನವಿ ಮಾಡಿದ್ದಾರೆ. ಮಂಗಳವಾರ ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಅಂತ್ಯಗೊಳ್ಳಲಿದೆ. ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಪತ್ರದ ಮೂಲಕ ಮನವಿಯನ್ನು ಮಾಡಿದ್ದಾರೆ. ಶುಕ್ರವಾರ ನ್ಯಾಯಾಲಯದ ಕಲಾಪದ ವೇಳೆ ಡಿ. ಕೆ. ಶಿವಕುಮಾರ್ ಬೆಂಬಲಿಗರು ಗದ್ದಲ ಮಾಡಿದ್ದರು. ಇದರಿಂದಾಗಿ ನ್ಯಾಯಾಧೀಶರು ಅಸಮಾಧಾನಗೊಂಡಿದ್ದರು.
ಸೆಪ್ಟೆಂಬರ್ 17ರ ಮಂಗಳವಾರ ನ್ಯಾಯಾಲಯದ ಕಲಾಪದ ವೇಲೆ ಈ ರೀತಿಯ ಘಟನೆಗಳು ನಡೆಯಬಾರದು. ಆದ್ದರಿಂದ, ಅಭಿಮಾನಿಗಳು, ಬೆಂಬಲಿಗರು ಅಂದು ನವದೆಹಲಿಗೆ ಬರುವುದು ಬೇಡ, ನಿಮ್ಮ ಊರಿನಲ್ಲಿಯೇ ಇರಿ ಎಂದು ಡಿ. ಕೆ. ಸುರೇಶ್ ಮನವಿ ಮಾಡಿದ್ದಾರೆ. ನವದೆಹಲಿಗೆ ಸೆಪ್ಟೆಂಬರ್ 17ರಂದು ಬರದಂತೆ ಡಿ. ಕೆ. ಶಿವಕುಮಾರ್ ಪರವಾಗಿ ಬೇಡಿಕೊಳ್ಳುತ್ತೇನೆ. ನ್ಯಾಯಾಲಯದಲ್ಲಿ ಕಲಾಪಕ್ಕೆ ತೊಂದರೆ ಆಗದಂತೆ ಸುಗಮವಾಗಿ ಕಲಾಪ ನಡೆಯುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇದಕ್ಕೆ ನೀವೆಲ್ಲರೂ ಬೆಂಬಲ ನೀಡಲಿದ್ದೀರಿ ಎಂದು ನಂಬುತ್ತೇನೆ ಎಂದು ಡಿ. ಕೆ. ಸುರೇಶ್ ಪತ್ರದಲ್ಲಿ ಹೇಳಿದ್ದಾರೆ.

Comments
Post a Comment