ಇದೀಗ ಬಂದ ಸುದ್ದಿ: ಭಾರತೀಯರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದ ಇಸ್ರೋ.? ಅಷ್ಟಕ್ಕೂ ಇಸ್ರೋ ಹೇಳಿದ್ದೇನು ಗೊತ್ತಾ.?

 ಚಂದ್ರನ ಮೇಲೆ ಆರ್ಬಿಟರ್ ಇಳಿಸುವ ಪ್ರಯತ್ನದಲ್ಲಿ ಕೊನೆಯ ಕ್ಷಣದಲ್ಲಿ ವಿಫಲವಾದ ಬಳಿಕ ಇಸ್ರೋ ಯೋಜನೆಯ ಪ್ರಗತಿಯ ಬಗ್ಗೆ ಹೆಚ್ಚೇನೂ ಮಾಹಿತಿ ನೀಡಿರಲಿಲ್ಲ. ವಿಕ್ರಂ ಲ್ಯಾಂಡರ್ ಎಲ್ಲಿದೆ ಎಂಬುದನ್ನು ಆರ್ಬಿಟರ್ ಕಂಡುಹಿಡಿದಿದೆ. ಆದರೆ ಲ್ಯಾಂಡರ್ ಜತೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಅದು ಸೆ. 10ರಂದು ತಿಳಿಸಿತ್ತು. ನಂತರ ಇದುವರೆಗೂ ಇಸ್ರೋ ವಿಕ್ರಂ ಲ್ಯಾಂಡರ್ ಬಗ್ಗೆಯಾಗಲೀ ಆರ್ಬಿಟರ್ ಕುರಿತಾಗಲೀ ಮಾಹಿತಿ ನೀಡಿರಲಿಲ್ಲ.

ಈ ನಡುವೆ ಗುರುವಾರ ಇಸ್ರೋ ಆರ್ಬಿಟರ್ ಕುರಿತು ಕೆಲವು ವಿಷಯಗಳನ್ನು ಹಂಚಿಕೊಂಡಿದೆ. ಅದರಲ್ಲಿ ಹಲವು ಸಂತಸಪಡುವ ಸಂಗತಿಗಳಿವೆ. ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಇದುವರೆಗೂ ಇಸ್ರೋದೊಂದಿಗೆ ಮಾತನಾಡದೆ ಮೌನವಹಿಸಿದ್ದರೂ, ಆರ್ಬಿಟರ್ ತನ್ನ ನಂಟನ್ನು ಕಡಿದುಕೊಂಡಿಲ್ಲ. ಉದ್ದೇಶಿಸಿದಂತೆಯೇ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಸುತ್ತಾಡುತ್ತಿರುವ ಆರ್ಬಿಟರ್, ಒಂದರಿಂದ ಏಳು ವರ್ಷದವರೆಗೂ ಅಲ್ಲಿ ಕಾರ್ಯನಿರ್ವಹಿಸಲಿದೆ. ಆರ್ಬಿಟರ್ ಕ್ಷೇಮವಾಗಿ ಮತ್ತು ತೃಪ್ತಿದಾಯಕವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಇಸ್ರೋ ಹೇಳಿದೆ. ಹೀಗಾಗಿ ಲ್ಯಾಂಡರ್ ವೈಫಲ್ಯವನ್ನು ಹೊರತುಪಡಿಸಿದರೆ ಚಂದ್ರಯಾನ-2 ಯೋಜನೆಯ ಭಾಗಶಃ ಯಶಸ್ವಿಯಾಗಿದೆ ಎಂದೇ ಹೇಳಬಹುದು.

ಚಂದ್ರನ ಸುತ್ತಲಿನ ತನ್ನ ಕಕ್ಷೆಯಲ್ಲಿ ಆರ್ಬಿಟರ್ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರ ಮೂಲಕ ವಿಕ್ರಂ ಲ್ಯಾಂಡರ್ ಜತೆ ಪುನಃ ಸಂಪರ್ಕ ಸಾಧಿಸುವ ಕೊನೆಯ ಹಂತದ ಪ್ರಯತ್ನಗಳು ಬಹುತೇಕ ಕ್ಷೀಣಿಸುತ್ತಿವೆ ಎಂಬ ಸುಳಿವು ನೀಡಿದೆ. ಹಾಗಿದ್ದರೂ ಆರ್ಬಿಟರ್ ಚಂದ್ರನ ಮೇಲೆ ತನಗೆ ವಹಿಸಿರುವ ಅನೇಕ ಕಾರ್ಯಗಳನ್ನು ನಿರ್ವಹಿಸಲಿದೆ. ಇದರಿಂದ ಇಸ್ರೋ ಮಹತ್ವದ ಅಧ್ಯಯನಗಳನ್ನು ನಡೆಸಲು ನೆರವಾಗಲಿದೆ.

Comments