ಸಾರಾ ಮಹೇಶ್ ದುರಹಂಕಾರದಿಂದ ಒಕ್ಕಲಿಗ ಶಾಸಕರಿಗೆ ಜೆಡಿಎಸ್ ಕುರಿತಾಗಿ ಮುನಿಸು ಶುರುವಾಗಿದೆ. ಇದೇ ಕಾರಣಕ್ಕಾಗಿ ದೇವೇಗೌಡರ ಕುಟುಂಬ ಕಣ್ಣೀರಿಡುತ್ತಿದೆ. ಇದಕ್ಕೆ ಕಾರಣ ಮಾಜಿ ಸಚಿವ ಸಾರಾ ಮಹೇಶ್ ಎಂದು ಅನರ್ಹ ಶಾಸಕ ಹೆಚ್ ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನ ಕೆಆರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನರ್ಹ ಶಾಸಕ ಹೆಚ್ ವಿಶ್ವನಾಥ್. ದೇವೇಗೌಡರ ಕುಟುಂಬ ಕಣ್ಣೀರಿಡಲು ಸಾರಾ ಮಹೇಶ್ ಮತ್ತು ಆತನ ಸ್ನೇಹಿತರು ಮೂಲ ಕಾರಣ ಕರ್ತರಾಗಿದ್ದಾರೆ. ಏಕೆಂದರೆ, ದುರಹಂಕಾರಿ ಸಾರಾ ಮಹೇಶ್ ನಿಂದ ಜೆಡಿಎಸ್ ನ ಒಕ್ಕಲಿಗ ಶಾಸಕರು ಮುನಿಸಿಕೊಳ್ಳುವಂತಾಯ್ತು ಎಂದು ಹೇಳಿದರು.
ದೇವೇಗೌಡರ ಈ ಸ್ಥಿತಿಗೆ ನಾವು ಕಾರಣ ಅಲ್ಲ. ದುಡ್ಡು ಹಂಚಿ ರಾಜಕಾರಣ ಮಾಡುವುದು ಸಾರಾ ಮಹೇಶ್ ಅಭ್ಯಾಸ. ಆದರೇ ಅಭಿವೃದ್ಧಿಯ ಹೆಸರಿನಲ್ಲಿ ರಾಜಕಾರಣ ಮಾಡುವುದು ನನ್ನ ಅಭ್ಯಾಸ. ಮೊದಲು ಸಾರಾ ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಖಡಕ್ ಆಗೇ ವಾರ್ನಿಂಗ್ ಮಾಡಿದರು.
Comments
Post a Comment