ಇದೀಗ ಬಂದ ಸ್ಪೋಟಕ ಬ್ರೇಕಿಂಗ್: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನ, ರಾಜ್ಯ ರಾಜಕೀಯವೇ ಶಾಕ್ ಆಯ್ತು ಕೋಡಿಮಠದ ಶ್ರೀಗಳ ಭವಿಷ್ಯಕ್ಕೆ.?

"ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಹೆಚ್ಚು ಕಾಲ ಆಯುಷ್ಯವಿಲ್ಲ" ಎಂದು ಭವಿಷ್ಯ ನುಡಿದಿದ್ದ ಕೋಡಿಮಠ ಸ್ವಾಮೀಜಿ, ಈಗ ಮತ್ತೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹಾವೇರಿಯಲ್ಲಿ ಮಾತನಾಡಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, "ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಸನ್ನಿಹಿತ" ಎಂದು ಹೇಳಿದ್ದಾರೆ. "ನಾನು ಮೊದಲೇ ಭವಿಷ್ಯ ಹೇಳಿದ್ದೇನೆ. 18 ತಿಂಗಳ ನಂತರ ಮತ ಭಿಕ್ಷೆ ಎಂದು (ಚುನಾವಣೆ). ಇದನ್ನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ. ಈಗ 14, 15 ತಿಂಗಳು ಮುಗಿದಿದೆ, ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ" ಎಂದು ಒಗಟಾಗಿ ಹೇಳಿದ್ದಾರೆ.

"ಬೆಳೆ ಒಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳ್ತಾರೆ ಎಂದಿದ್ದೆ" ಎಂದು ಹೇಳುತ್ತಲೇ ಬಿಎಸ್ ವೈ ಸರ್ಕಾರ ಪತನದ ಮುನ್ಸೂಚನೆ ನೀಡಿದ್ದಾರೆ. ಕಾರ್ತಿಕ ಕಳೆಯುವವರೆಗೂ ಈ ಲಕ್ಷಣ ಇದೆ ಎಂದು ತಿಳಿಸಿದ್ದಾರೆ. ಇದೇ ಆಗಸ್ಟ್ ನಲ್ಲಿ ಬಾಗಲಕೋಟೆಯ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇಡೀ ಜಗತ್ತು ಬೆಚ್ಚಿಬೀಳುವ ಆಘಾತವೊಂದು ಕಾದಿದೆ ಎಂದು ಹೇಳಿದ್ದರು. ಇದರಿಂದ ಭಾರೀ ನಷ್ಟವಾಗುವ ಸೂಚನೆಯನ್ನೂ ಕೊಟ್ಟು ಭವಿಷ್ಯ ನುಡಿದಿದ್ದರು. ಅದರಂತೆ ಈ ತಿಂಗಳಲ್ಲಿ ಭೀಕರ ಪ್ರವಾಹ ಎದುರಾಯಿತು, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಹಲವೆಡೆ ಅತಿವೃಷ್ಟಿಯಾಯಿತು. ಮಳೆಯಾಗಿ ಹೆಚ್ಚಿನ ಮಟ್ಟದಲ್ಲಿ ನಷ್ಟವನ್ನು ತಂದವು. ದೇಶಕ್ಕೆ ಮೂರು ತಿಂಗಳವರೆಗೂ ಜಲಕಂಟಕ ಇದೆ ಎಂದು ಸ್ವಾಮೀಜಿ ನುಡಿದಿದ್ದರು.

ಹೀಗೆ ಒಂದೂವರೆ ವರ್ಷದ ಹಿಂದೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಕುರಿತು ಕೋಡಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಈ ಸರ್ಕಾರಕ್ಕೆ ಹೆಚ್ಚು ಕಾಲ ಆಯುಷ್ಯ ಇಲ್ಲ ಎಂದು ಹೇಳಿದ್ದರು. ಅದರಂತೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡಿತು. ಕಳೆದ ವರ್ಷ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದರು. ಭೀಕರ ಬರಗಾಲದಿಂದ ಹಲವು ಜಿಲ್ಲೆಗಳು ತತ್ತರಿಸಿದ್ದವು. ಆದರೆ ಆ ಸಮಯದಲ್ಲಿ ಚಿಂತಿಸುವ ಅಗತ್ಯವಿಲ್ಲ, ಒಂದು ವರ್ಷದಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ಬೆಳಗಾವಿಯಲ್ಲಿ ಭರವಸೆ ನೀಡಿದ್ದರು ಸ್ವಾಮೀಜಿ. ಕಳೆದ ಏಪ್ರಿಲ್ ನಲ್ಲಿ ಅವರು ಈ ಭವಿಷ್ಯ ನುಡಿದಿದ್ದು, ಇದೀಗ ಬೆಳಗಾವಿ ಅತಿವೃಷ್ಟಿಯಿಂದಾಗಿ ತತ್ತರಿಸಿದೆ. ಅವರು ಹೇಳಿದಂತೆ ಎಲ್ಲ ಕಡೆ ನೀರು ಹರಿದಾಡಿದೆ.

ಇದೇ ವರ್ಷದ ಮಾರ್ಚ್ ನಲ್ಲಿ ಯಾದಗಿರಿಯಲ್ಲಿ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಕೋಡಿಶ್ರೀಗಳು, "ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ" ಎಂದು ಭವಿಷ್ಯ ನುಡಿದಿದ್ದರು. ಈ ಮೂಲಕ ದೇಶದಲ್ಲಿ ಮತ್ತೆ ಮೋದಿ ಪ್ರಧಾನಿಯಾಗುವ ಸೂಚನೆಯನ್ನೂ ಸ್ವಾಮೀಜಿ ನೀಡಿದ್ದಾರೆ ಎಂದು ಭಾವಿಸಲಾಗಿತ್ತು.

Comments