ಮೆಗಾ ಬ್ರೇಕಿಂಗ್: ಮೋದಿ ಸರ್ಕಾರವನ್ನು ಟೀಕಿಸಿ, ಪಾಕಿಸ್ಥಾನವನ್ನು ಹಾಡಿ ಹೊಗಳಿದ ದೇಶದ ಪ್ರಭಾವಿ ರಾಜಕಾರಣಿ

" ನಾನು ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ಉತ್ತಮ ಆತಿಥ್ಯ ಪಡೆದಿದ್ದೇನೆ. ಪಾಕಿಸ್ಥಾನದ ಪ್ರಜೆಗಳು ಸುಖದಲ್ಲಿಲ್ಲ ಎಂದು ಸುಳ್ಳನ್ನು ಹಬ್ಬಲಾಗುತ್ತಿದೆ. ಕೇಂದ್ರ ಸರಕಾರ ತನ್ನ ರಾಜಕೀಯ ಉದ್ದೇಶಗಳಿಗಾಗಿ ಪಾಕ್‌ ನ ಬಗ್ಗೆ ವಿವಿಧ ರೀತಿಯ ಸುಳ್ಳನ್ನು ಪ್ರಚಾರ ಪಡಿಸುತ್ತಿದೆ ಎಂದು ನ್ಯಾಶನಿಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಹೇಳಿಕೆ ನೀಡಿದ್ದಾರೆ.

ಮುಂಬಯಿಯ ಎನ್‌ ಸಿಪಿ ಕಚೇರಿಯಲ್ಲಿ ಅಲ್ಪಸಂಖ್ಯಾತರ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಶರದ್‌ ಪವಾರ್‌ ಮಾತನಾಡಿದರು.

ಇತ್ತೀಚೆಗೆ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ನಡೆಯನ್ನು ಟೀಕಿಸಿದ ಪವಾರ್‌, ಇದರಿಂದ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಲಿವೆ ಎಂದರು.
ಗುಂಪು ಘರ್ಷಣೆಯಿಂದ ಜನರನ್ನು ಕೊಲ್ಲುವುದನ್ನು ಒಂದು ಸಮುದಾಯ ʼರಾಷ್ಟ್ರೀಯತೆʼ ಎಂದು ಬಣ್ಣಿಸುತ್ತಿದೆ. ಕೆಲವರು ʼನಾನು ಭಾರತೀಯʼ ಎಂದು ಹೇಳಿ ತಮ್ಮ ದೇಶಪ್ರೇಮ ಸಾಬೀತುಪಡಿಸುತ್ತಿದ್ದಾರೆ. ಆದರೆ ತಮ್ಮ ದೇಶಪ್ರೇಮ ಸಾಬೀತುಪಡಿಸಲು ಪ್ರತ್ಯೇಕ ಶಬ್ಧವನ್ನು ಒತ್ತಿ ಹೇಳಬೇಕೆಂದು ನನಗನಿಸುವುದಿಲ್ಲ ಎಂದು ಶರದ್‌ ಪವಾರ್‌ ಅಭಿಪ್ರಾಯಪಟ್ಟರು.

Comments