ಇದೀಗ ಬಂದ ಸುದ್ದಿ: ಶಿವಕುಮಾರ್ ಗೆ ಭರ್ಜರಿ ಗುಡ್ ನ್ಯೂಸ್, ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಗೆ ಬಿಗ್ ರಿಲೀಫ್.?
ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೌದು, ಐಟಿ ಇಲಾಖೆ ದಾಖಲಿಸಿದ್ದ ನಾಲ್ಕನೇ ಪ್ರಕರಣದ ತಡೆ ಕೋರಿ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.
ಡಿ.ಕೆ ಶಿವಕುಮಾರ್ ಒಡೆತನದ ದೆಹಲಿಯ ನಿವಾಸಗಳಲ್ಲಿ ಅಕ್ರಮ ಹಣ ಪತ್ತೆ ಆರೋಪ ಸಂಬಂಧ ಐಟಿ ಇಲಾಖೆ ಪ್ರಕರಣ ದಾಖಲಿಸಿತ್ತು. ಇನ್ನೂ ಈ ಕೇಸ್ ನಿಂದ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿ ಶಿವಕುಮಾರ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ ಶಿವಕುಮಾರ್ ಅರ್ಜಿಯನ್ನು ತಿರಸ್ಕರಿಸಿತ್ತು. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ರು. ಪ್ರಕರಣದ 2ನೇ ಅರೋಪಿ ಸಚಿನ್ ನಾರಾಯಣ್ ವಿಚಾರಣೆಗೆ ಈಗಾಗಲೇ ಹೈ ಕೋರ್ಟ್ ತಡೆ ನೀಡಿದೆ. ಅಂತೆಯೇ ಇಂದು ಶಿವಕುಮಾರ್ ಅವರಿಗೂ ವಿಚಾರಣೆಗೆ ತಡೆ ನೀಡಿ ಅಂತಾ ವಕೀಲರು ಮನವಿ ಮಾಡಿದ್ರು. ಅಂತೆಯೇ ಕೋರ್ಟ್ ಶಿವಕುಮಾರ್ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ.
Comments
Post a Comment