ಸ್ಪೋಟಕ ಬ್ರೇಕಿಂಗ್: ಸಚಿವ ಸ್ಥಾನ ಸಿಗದೇ ಬೇಸರದಲ್ಲಿದ್ದ ಬಾಲಚಂದ್ರ ಜಾರಕಿಹೊಳಿಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ.?

ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿಗೆ ಕೆಎಂಎಫ್ ಅಧ್ಯಕ್ಷಗಾದಿ ಪಟ್ಟ ಸಿಗುವ ಸಾಧ್ಯತೆ ಇದೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ನಡುವೆ ಈ ಹುದ್ದೆಗೆ ಜಿದ್ದಾಜಿದ್ದಿ ನಡೆಯುತ್ತಿತ್ತು. 

ಮಧ್ಯಪ್ರವೇಶಿಸಿದ್ದ ಬಿಜೆಪಿ ಸರ್ಕಾರ ಅಧ್ಯಕ್ಷ ಸ್ಥಾನದ ಚುನಾವಣೆಗಳನ್ನು ದಿಢೀರ್ ರದ್ದು ಪಡಿಸಿ ಇದೀಗ ಆಗಸ್ಟ್ 31 ರಂದು ಘೋಷಿಸಿದೆ. ನಾನಾ ಜಿಲ್ಲಾ ಹಾಲು ಒಕ್ಕೂಟಗಳ 12 ಸದಸ್ಯರು, ಸರ್ಕಾರದಿಂದ ನಾಮನಿರ್ದೇಶಿತ ಒಬ್ಬರು, ಇಬ್ಬರು ಅಧಿಕಾರಿಗಳು ಹಾಗೂ ಒಬ್ಬರು ಎನ್ ಡಿಡಿಬಿ ಸದಸ್ಯರು ಸೇರಿ 16 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಇನ್ನು ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗುವುದಾದರೆ ಅಭ್ಯಂತರವಿಲ್ಲ ಎಂದು ಭೀಮಾ ನಾಯ್ಕ್ ಸಿಎಂ ಬಳಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

Comments