ಮತ್ತೊಮ್ಮೆ ದೆಹಲಿ ಕಡೆ ಹಾರಿದ ಸಿಎಂ !! ಡಿಸಿಎಂ ಯಾರೆಂದು ಘೋಷಿಸಿದ ಶಾ !! ಸ್ಥಾನ ಸಿಗದ ಕರಾವಳಿ ಶಾಸಕನಿಗೆ ಒಲಿಯಿತು ಡಿಸಿಎಂ ಪಟ್ಟ
ಬಿಜೆಪಿ ಸರ್ಕಾರದ ಸಚಿವ ಸಂಪುಟವೇನೋ ರೆಡಿಯಾಯ್ತು. ಆದ್ರೆ ಇದೀಗ ಖಾತೆ ಹಂಚಿಕೆಯಲ್ಲಿ ಕಗ್ಗಂಟು ಶುರುವಾಗಿದೆ. ಯಾರಿಗೆ ಯಾವ ಖಾತೆ ನೀಡಬೇಕು ಎನ್ನುವ ಇಕ್ಕಟ್ಟಿನಲ್ಲಿ ಯಡಿಯೂರಪ್ಪ ಇದ್ದಾರೆ. ಇದರ ಮಧ್ಯೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಹೈಕಮಾಂಡ್ ಸೂಚನೆ ನೀಡಿದ್ದು, ಒಂದಲ್ಲ ಎರಡಲ್ಲ ಮೂರು ಡಿಸಿಎಂಗಳನ್ನು ಸೃಷ್ಟಿ ಮಾಡುವಂತೆ ಹೈಕಮಾಂಡ್ ನಿಂದ ಸಂದೇಶ ರವಾನಿಯಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ಮೂರು ಡಿಸಿಎಂ ಹುದ್ದೆಯ ಹಿಂದಿನ ಬಿಜೆಪಿ ಪ್ಲಾನ್ ಏನು? ಅಂದ್ರೆ,
ಈ ಮೂರು ಡಿಸಿಎಂ ಹುದ್ದೆಗಳಲ್ಲಿ ಒಂದು ಅನರ್ಹ ಶಾಸಕರಲ್ಲಿ ಒಬ್ಬರಿಗೆ ಒಂದು. ಡಿಸಿಎಂ ಹುದ್ದೆಬಗೆಹರಿಯುವವರೆಗೆ ಖಾತೆ ಹಂಚಿಕೆ ಕಗ್ಗಂಟಾಗಿ ಉಳಿಯಲಿದೆ. ಅಲ್ಲದೆ ಯಡಿಯೂರಪ್ಪ ಡಿಸಿಎಂ ಹುದ್ದೆಯ ಅಜೆಂಡಾವನ್ನ ಒಪ್ಪಲು ಸಿದ್ದರಿಲ್ಲ.
ಆದ್ರೆ, ಹೈಕಮಾಂಡ್ ಮೂವರಿಗೆ ಡಿಸಿಎಂ ಹುದ್ದೆ ನೀಡುವಂತೆ ಆದೇಶ ನೀಡಿದೆ. ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವಥ ನಾರಾಯಣ ಅವರಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ಹೈಕಮಾಂಡ್ ಸೂಚಿಸಿದೆ.
ಹೈಕಮಾಂಡ್ ಈ ಒಂದು ಪ್ಲೇನ್ ಸೃಷ್ಟಿಸಲು ಕಾರಣವೆಂದರೆ. ಬಿಜೆಪಿಯಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಸುವ ಕಾರಣದಿಂದ ಅಮಿತ್ ಶಾ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Comments
Post a Comment