ಇದೀಗ ಬಂದ ಸುದ್ದಿ: ಜೆಡಿಎಸ್ ರಾಜ್ಯಾಧ್ಯಕ್ಷ ಬಿಜೆಪಿಗೆ.? ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ.?

ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ರಾಜಕೀಯ ದೃವೀಕರಣವಾಗಲಿದೆ ಎಂದು ಹೇಳಿರುವ ಸಚಿವ ಸಿ.ಟಿ.ರವಿ ಅವರ ಭವಿಷ್ಯ ಹಲವು ಕುತೂಹಲಕ್ಕೆ ಕಾರಣವಾಗಿದೆ. ಸಕಲೇಶಪುರ ತಾಲ್ಲೂಕಿನ ನೆರೆ‌ ಹಾವಳಿ ಪ್ರದೇಶದ ವೀಕ್ಷಣೆ ಬಳಿಕ‌ ಮಾತನಾಡಿದ ಅವರು ಹಾಸನ‌ ಶಾಸಕ‌ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಕೇಳಲಾದ‌ ಪ್ರಶ್ನೆಗೆ ಉತ್ತರಿಸಿ ಮೇಲಿನಂತೆ ದೃವೀಕರಣದ ಭವಿಷ್ಯ ಹೇಳಿದರು.

ಪ್ರೀತಂ ಅವರಿಗೆ ಸಚಿವ ಸ್ಥಾನ ಹಂಚಿಕೆ ಇರಲಿ ಮುಂದೆ ಯಾವ ರೀತಿ ರಾಜ್ಯದಲ್ಲಿ ರಾಜಕೀಯ ದೃವೀಕರಣವಾಗಲಿದೆ ಕಾದು ನೋಡಿ ಎಂದು ಹೇಳಿದರು. ಈ‌ ವೇಳೆ ರವಿ ಅವರ ಎದುರಿಗೆ ಇದ್ದ ಸಕಲೇಶಪುರ ಶಾಸಕ‌ ಹಾಗೂ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಬಿಜೆಪಿ ಸೇರಲಿದ್ದಾರೆ ಎಂಬ ಹಿಂದೆ ಇದ್ದ ಉಹಾಪೊಹಕ್ಕೆ ರವಿ ಅವರ ಈ ಒಂದು ದೃವೀಕರಣ ಭವಿಷ್ಯ ಕುಮಾರಸ್ವಾಮಿ ಬಿಜೆಪಿ ಸೇರಬಹುದೆಂಬ ಮಾತಿಗೆ ರೆಕ್ಕೆಪುಕ್ಕ ಬಂದಂತಾಗಿದೆ.

ಅಲ್ಲದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಬಿಜೆಪಿ ಕಡೆಗೆ ಬರಲಿದ್ದಾರೆ ಎಂಬಂತೆ ಮಾತುಗಳನ್ನಾಡಿದ ರವಿ ರಾಜ್ಯದ ಹಿತಕ್ಕಾಗಿ ಯಾರೇ ಬಿಜೆಪಿಗೆ ಬಂದರು ಸೇರಿಸಿಕೊಳ್ಳಲಾಗುವುದು ಎಂದರು. ಪ್ರಸಕ್ತ ರಾಜ್ಯದ ಪ್ರಥಮ ಸಂಪುಟ ಹಳೆ ಬೇರು ಹೊಸ ಚಿಗುರಂತೆ‌ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ ಇಲ್ಲಿ ಸಚಿವ ಸ್ಥಾನ‌ ಹಂಚಿಕೆಗೆ ಹಲವು ಮಾನದಂಡವನ್ನು ಪರಿಗಣಿಸಲಾಗಿದೆ ಅದರಂತೆ ಸಚಿವರ ನ್ನು ಆಯ್ಕೆ ಮಾಡಲಾಗಿದೆ ಇದರಲ್ಲಿ ಹಳಬರು ಹೊಸಬರಿಗೆ ಅವಕಾಶ ನೀಡಿದ್ದು ಸಮರ್ಥವಾಗಿ ತಮ್ಮ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದರು. ನಮ್ಮ ಪಕ್ಷದ 106 ಶಾಸಕರು ಸಹ ಸಚಿವ ಸ್ಥಾನದ ಆಕಾಂಕ್ಷಿತರೆ ಎಲ್ಲರು ಸಮರ್ಥರೆ . ಮುಂದಿನ ದಿನದಲ್ಲಿ ಉಳಿದವರಿಗೂ ಸಚಿವ ಸ್ಥಾನ ಲಭಿಸಲಿದೆ ಎಂದು ಭವಿಷ್ಯ ನುಡಿದರು.

Comments