ಇದೀಗ ಬಂದ ಸುದ್ದಿ: ಬಿಜೆಪಿಗೆ ಹಾರಿದ ಕಾಂಗ್ರೆಸ್ ಶಾಸಕ, ಅನರ್ಹಗೊಳಿಸಿದ ಸ್ಪೀಕರನ್ನು ತರಾಟೆಗೆ ತೆಗೆದುಕೊಂಡ ಹೈ ಕೋರ್ಟ್
ಪಕ್ಷಕ್ಕೆ ರಾಜೀನಾಮೆ ನೀಡದೆ ಬಿಜೆಪಿಗೆ ಪಕ್ಷಾಂತರಗೊಂಡು ಸಚಿವನಾಗಿರುವ ಕಾಂಗ್ರೆಸ್ ಪಕ್ಷದ ಶಾಸಕನನ್ನು ಅನರ್ಹಗೊಳಿಸದಿರುವ ಕಾರಣಕ್ಕೆ ಮಣಿಪುರ ವಿಧಾನಸಭೆಯ ಸ್ಪೀಕರನ್ನು ಮಣಿಪುರ ಉಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಶಾಸಕ ಶ್ಯಾಮಕುಮಾರ್ ಸಿಂಗ್ 2017ರಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡದೆ ಮತ್ತು ಮರುಚುನಾವಣೆಯನ್ನೂ ಬಯಸದೆ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ ಮತ್ತು ಎನ್.ಬಿರೆನ್ ಸಿಂಗ್ ಸರಕಾರದಲ್ಲಿ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಇದು ಸಂವಿಧಾನದ 10ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪಕ್ಷಾಂತರಗೊಂಡ ಶಾಸಕ, ಸ್ಪೀಕರ್ ಮತ್ತು ವಿಧಾನಸಭಾ ಕಾರ್ಯದರ್ಶಿ ವಿರುದ್ಧ ಕಾಂಗ್ರೆಸ್ ಶಾಸಕರಾದ ಟಿ.ಎನ್ ಹೊಕಿಪ್ ಮತ್ತು ಫಜುರ್ ಸಲ್ಲಿಸಿದ್ದ ಮನವಿಯನ್ನು ಜುಲೈ 23ರಂದು ನ್ಯಾಯಾಧೀಶ ನೊಬಿನ್ ಸಿಂಗ್ ಕಾನೂನು ವ್ಯಾಪ್ತಿಯ ಸಮಸ್ಯೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದರು. ಆದರೆ ಹಾಗೆ ಮಾಡುವ ಮೊದಲು, ಬಿಜೆಪಿ ಶಾಸಕರೂ ಆಗಿರುವ ವಿಧಾನಸಭಾ ಸ್ಪೀಕರ್ ಯುಮ್ನನ್ ಖೇಮ್‌ಚಂದ್ ಸಿಂಗ್ ಅವರ ನಿಷ್ಕ್ರಿಯತೆ ಮತ್ತು ನಿರ್ಧಾರರಹಿತತೆಯ ಬಗ್ಗೆ ದೀರ್ಘ ಹೇಳಿಕೆ ನೀಡಿದ್ದರು.
ಬಿಜೆಪಿಗೆ ಪಕ್ಷಾಂತರಗೊಂಡ ಕಾಂಗ್ರೆಸ್ ಶಾಸಕನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಇತರ ಏಳು ಶಾಸಕರು ಬಹಿರಂಗವಾಗಿ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಬಿಜೆಪಿ ಸೇರಿದ್ದರು.
Comments
Post a Comment