ಈಗಾಗಲೇ ಮೈತ್ರಿ ಸರ್ಕಾರ ಪತನವಾಗಿದ್ದು ಹಾಗೂ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದಾರೆ, ಇದೀಗ ಜೆಡಿಎಸ್ ಮತ್ತೊಂದು ಶಾಕ್ ಎದುರಾಗಿದ್ದು, ಜೆಡಿಎಸ್ ನ ಸಚಿವ ಜಿ.ಟಿ. ದೇವೇಗೌಡ ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬಿಜೆಪಿಗೆ ಬರುತ್ತಿರುವ ಜಿ.ಟಿ. ದೇವೇಗೌಡರಿಗೆ ಸ್ವಾಗತ ಎಂಬ ಪೋಸ್ಟ್ ಗಳು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು, ಈ ಸಂದೇಶ ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ವಾಟ್ಸಪ್ ಗ್ರೂಪ್ ಗಳಲ್ಲಿ, ಅಪ್ಪ ಮಕ್ಕಳ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿಗೆ ಮರಳಿ ಬರುತ್ತಿರುವ ಸಚಿವರು ಜಿ.ಟಿ.ದೇವೇಗೌಡರವರಿಗೆ ಸುಸ್ವಾಗತ, ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಜೀ ರವರು ದೇಶಕ್ಕೆ ನೀಡುತ್ತಿರುವ ಅಪಾರ ಯೋಜನೆಗಳನ್ನು ಇಷ್ಟಪಟ್ಟು ಬಿಜೆಪಿಗೆ ಸೇರುತ್ತಿರುವ ಜಿಟಿಡಿ ರವರಿಗೆ ಸುಸ್ವಾಗತ. ನಿಮ್ಮ ಪುತ್ರನಾದ ಹರೀಶ್ ಗೌಡರವರಿಗೆ ಚುನಾವಣೆ ಟಿಕೆಟ್ ನೀಡದ ಜೆಡಿಎಸ್ ಪಕ್ಷ ಇದ್ದು ಸತ್ತಂತೆ ಎಂದು ಸಂದೇಶ ಹರಿದಾಡುತ್ತಿದೆ.
'ಜಿ.ಟಿ.ದೇವೇಗೌಡ ಅವರು ಸಹ ರಾಜೀನಾಮೆ ಕೊಡುತ್ತಾರೆ ಕಾದು ನೋಡಿ. ಸಾ.ರಾ.ಮಹೇಶ್ ನಡವಳಿಕೆ ಸರಿಯಿಲ್ಲ. ಜಿ.ಟಿ.ದೇವೇಗೌಡ ಬೇಸತ್ತು ಹೋಗಿದ್ದಾರೆ. ಅವರು ಎಲ್ಲ ಪಕ್ಷದಲ್ಲಿ ಇದ್ದು ಬಂದಿರುವವರು ರಾಜೀನಾಮೆ ನೀಡುವ ಸಾಧ್ಯತೆ ಇದೆ' ಎಂದು ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದರು.

Comments
Post a Comment