ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿರುವುದರಿಂದ ತೆರವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಹಲವರ ಕಣ್ಣು ಬಿದ್ದಿದೆ. ಜಗದೀಶ್ ಶೇಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಿ.ಶ್ರೀರಾಮುಲು, ಅರವಿಂದ್ ಲಿಂಬಾವಳಿ, ಉಮೇಶ್ ಕತ್ತಿ, ಸುರೇಶ್ ಕುಮಾರ್, ಗೋವಿಂದ್ ಕಾರಜೋಳ, ಯುವಕರ ಕೋಟಾದಲ್ಲಿ ಸಿ.ಟಿ.ರವಿ, ಸುನೀಲ್ ಕುಮಾರ್ ಹೆಸರಗಳು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿವೆ. ಆದರೆ, ಇವರೆಲ್ಲ ಮೊದಲಿಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಕೆಲವರು ಸಚಿವ ಸ್ಥಾನ ಇಲ್ಲವೆಂದರೆ, ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹಾಲಿ ಅಧ್ಯಕ್ಷರ ಅವಧಿ ಏಪ್ರಿಲ್ 5 ಕ್ಕೆ ಅಂತ್ಯವಾಗಿದೆ. ಬಿ.ಎಸ್. ಯಡಿಯೂರಪ್ಪ ಅವರಿಂದ ತೆರವಾಗಿರುವ ಅಧ್ಯಕ್ಷ ಸ್ಥಾನದ ಮೇಲೆ ಸಾಲು ಸಾಲು ನಾಯಕರ ಕಣ್ಣು ಬಿದ್ದಿದ್ದು, ಒಕ್ಕಲಿಗ, ವೀರ ಶೈವ ಲಿಂಗಾಯತ, ದಲಿತ, ಬ್ರಾಹ್ಮಣ, ಒಬಿಸಿ ಸೇರಿದಂತೆ ಎಲ್ಲ ಸಮುದಾಯದ ಹಿರಿಯ ನಾಯಕರು ಅಧ್ಯಕ್ಷ ಗಾದಿಗಾಗಿ ಪ್ರಯತ್ನ ನಡೆಸಿದ್ದಾರೆ.
ಇನ್ನು ಯಾರನ್ನು ಅಧ್ಯಕ್ಷ ಪಟ್ಟದ ಮೇಲೆ ಕೂರಿಸುತ್ತಾರೆ ಎಂಬ ಸುಳಿವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಿಟ್ಟುಕೊಟ್ಟಿಲ್ಲ. ಜಾತಿ ಆಧಾರ, ಮತ ಬ್ಯಾಂಕ್, ಸಂಘಟನಾ ಚತುರತೆ, ಯುವಕರು, ಹೊಸಮುಖ, ಪಕ್ಷನಿಷ್ಠೆ ಯಾವುದರ ಆಧಾರದ ಮೇಲೆ ಅಧ್ಯಕ್ಷ ಸ್ಥಾನದ ಆಯ್ಕೆ ಮಾಡುತ್ತಾರೆ ಎಂಬುದು ರಹಸ್ಯವಾಗಿಯೇ ಉಳಿದಿದೆ.

Comments
Post a Comment