ರಾಜೀನಾಮೆ ನೀಡಿ ಮಹಾರಾಷ್ಟ್ರದ ವಿರೋಧ ಪಕ್ಷಗಳಿಗೆ ಶಾಕ್ ನೀಡಿದ್ದ ಕಾಂಗ್ರೆಸ್-ಎನ್‍ಸಿಪಿ ಪಕ್ಷದ ನಾಲ್ವರು ಶಾಸಕರು ಇಂದು ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜಧಾನಿ ಮುಂಬೈನಲ್ಲಿ ಇಂದು ಮುಂಜಾನೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರ ಸಮ್ಮುಖದಲ್ಲಿ ಈ ನಾಲ್ವರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನವೇ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಮತ್ತು ಎನ್‍ಸಿಪಿಯ ನಾಲ್ವರು ಶಾಸಕರು ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್‍ನ ಕಾಳಿದಾಸ ಕೊಳಂಬಕರ್, ಎನ್‍ಸಿಪಿಯ ಶಿವೇಂದ್ರ ಸಿನ್ಹ ಬೋಂಸ್ಲೆ, ವೈಭವ್ ಪಿಚಾರ್ಡ್ ಮತ್ತು ಸಂದೀಪ್ ನಾಯಕ್ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾದ್ಯಕ್ಷ ಹರಿಬಾಬು ಬಾಗಡೆ ಅವರಿಗೆ ಸಲ್ಲಿಸಿದ್ದರು.
ಕಾಂಗ್ರೆಸ್‍ನ ಕಾಳಿದಾಸ ಕೊಳಂಬಕರ್, ಎನ್‍ಸಿಪಿಯ ಶಿವೇಂದ್ರ ಸಿನ್ಹ ಬೋಂಸ್ಲೆ, ವೈಭವ್ ಪಿಚಾರ್ಡ್ ಮತ್ತು ಸಂದೀಪ್ ನಾಯಕ್ ಅವರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾದ್ಯಕ್ಷ ಹರಿಬಾಬು ಬಾಗಡೆ ಅವರಿಗೆ ಸಲ್ಲಿಸಿದ್ದರು.
ಇಂದು ಬಿಜೆಪಿ ಸೇರ್ಪಡೆಯಾಗಿರುವ ನಾಲ್ವರಿಗೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡುವ ಸಾಧ್ಯತೆ ಇದೆ.
Comments
Post a Comment