ಹಿಂದೆಂದೂ ಕಂಡಿರದ ರೀತಿಯಲ್ಲಿ ಪ್ರಧಾನಿ ಮೋದಿ! ವಿಡಿಯೋ.!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾವೆಂದೂ ಈ ಹಿಂದೆ ನೋಡದ ರೀತಿಯಲ್ಲಿ ಕಾಣಸಿಗಲಿದ್ದು, ಮೋದಿಯವರು ಡಿಸ್ಕವರಿ ಚಾನೆಲ್ ನಲ್ಲಿ ಬೇರ್ ಗ್ರಿಲ್ಸ್ ಸಾರಥ್ಯದಲ್ಲಿ ಪ್ರಸಾರವಾಗುವ ಮ್ಯಾನ್ vs ವೈಲ್ಡ್ ಕಾರ್ಯಕ್ರಮದಲ್ಲಿ ಕಾಣಸಿಗಲಿದ್ದಾರೆ. ಮೋದಿ ಬೇರ್ ಗ್ರಿಲ್ಸ್ ಜೊತೆ ಉತ್ತರಾಖಂಡದ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಸಾಹಸಯಾತ್ರೆ ಕೈಗೊಂಡಿದ್ದು, ಇದರ ಮೊದಲ ಎಪಿಸೋಡ್ ನ ವಿಶೇಷ ಪ್ರಸಾರ ಆಗಸ್ಟ್ 12 ರಂದು ಸುಮಾರು 180 ದೇಶಗಳ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ಈಗಾಗಲೇ ಮ್ಯಾನ್ vs ವೈಲ್ಡ್ ಸರಣಿಯ ಕಾರ್ಯಕ್ರಮದಲ್ಲಿ ಈ ಹಿಂದೆ ಬರಾಕ್ ಒಬಾಮ ಸೇರಿದಂತೆ ಹಾಲಿವುಡ್ ನ ಖ್ಯಾತನಾಮರಾದ ಜಾಕ್ ಎಫ್ರಾನ್, ಚಾನ್ನಿಂಗ್ ಟಾಟಾಮ್, ಮೈಕಲ್ ಬಿ. ಜೋರ್ಡಾನ್, ಬೆನ್ ಸ್ಟಿಲ್ಲರ್ ಸೇರಿದಂತೆ ಜಗತ್ತಿನ ಹಲವು ಖ್ಯಾತನಾಮರು ಭಾಗವಹಿಸಿದ್ದಾರೆ. ಈ ವಿಚಾರವನ್ನು ಬೇರ್ ಗ್ರಿಲ್ಸ್ ಟ್ವಿಟ್ಟರ್ ಮೂಲಕ ಪ್ರಕಟಿಸಿದ್ದಾರೆ. ನೆನ್ನೆ ಈ ಕುರಿತು ಇವರು ಮಾಡಿರತಕ್ಕಂತಹ ಮೊದಲ ಟ್ವೀಟ್ ನಲ್ಲಿ “ಈ ವರ್ಷದ ಅತೀ ದೊಡ್ಡ ಪ್ರಕಟಣೆಯನ್ನು ನಾಳೆ ಬೆಳಗ್ಗೆ ಪ್ರಕಟ ಮಾಡಲಿದ್ದು, ಪ್ರಪಂಚದ ಅತ್ಯಂತ ಶಕ್ತಿಶಾಲಿ ನಾಯಕರೊಬ್ಬರು ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ” ಎಂದು ಟ್ವೀಟ್ ಮಾಡಿ ಜನರಲ್ಲಿ ಭಾರೀ ಕುತೂಹಲ ಮೂಡಿಸಿದ್ದರು.
ಇಂದು ಮತ್ತೆ ಈ ಬಗ್ಗೆ ಟ್ವೀಟ್ ಮಾಡಿದ್ದ ಬೇರ್ ಗ್ರಿಲ್ಸ್ “ಪ್ರಪಂಚದ 180 ರಾಷ್ಟ್ರಗಳ ಜನರು ಪ್ರಧಾನಿ ಮೋದಿಯವರನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಕಾಣಲಿದ್ದು, ಪ್ರಾಣಿ ಸಂರಕ್ಷಣೆ ಹಾಗೂ ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸಲು ಉತ್ತರಖಂಡ್ ನ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಈ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗಿದೆ” ಎಂದು ಟ್ವೀಟ್ ಮಾಡಿ ಪ್ರೊಮೋವೊಂದನ್ನು ಬಿಡುಗಡೆ ಮಾಡಿದ್ದಾರೆ.
People across 180 countries will get to see the unknown side of PM @narendramodi as he ventures into Indian wilderness to create awareness about animal conservation & environmental change. Catch Man Vs Wild with PM Modi @DiscoveryIN on August 12 @ 9 pm.
50.9K people are talking about this
ಇನ್ನು ಈ ಬಗ್ಗೆ ಮೋದಿಯವರು ಸಹ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು “ಭಾರತ – ಇಲ್ಲಿ ನೀವು ಹಚ್ಚ ಹಸಿರಿನ ಕಾಡುಗಳು, ಬೇರೆಲ್ಲೂ ಕಾಣಸಿಗದಂತ ವನ್ಯಮೃಗಗಳನ್ನು, ಸುಂದರವಾದ ಪರ್ವತಗಳನ್ನು, ನದಿಗಳನ್ನು ಇಲ್ಲಿ ನೀವು ನೋಡುತ್ತೀರಿ. ಈ ಕಾರ್ಯಕ್ರಮ ನೋಡಿದ ಬಳಿಕ ನೀವು ಭಾರತದ ವಿವಿಧ ಭಾಗಗಳಿಗೆ ಭೇಟಿ ನೀಡಲು ಇಚ್ಛೆ ಪಡುತ್ತಿರಿ” ಎಂದು ಟ್ವೀಟ್ ಮಾಡಿದ್ದಾರೆ.

Comments