''ರಮೇಶ್ ಕುಮಾರ್ ತೀರ್ಪನ್ನು ಕೇಳಿದೆ. ಯಾವ್ಯಾವ ಸನ್ನಿವೇಶದಲ್ಲಿ ಏನೇನು ಆಯ್ತು. ಸರಕಾರ ಯಾರ ಪರವಾಗಿತ್ತು. ಇವೆಲ್ಲವನ್ನೂ ಸುದೀರ್ಘವಾಗಿ ಯೋಚಿಸಬೇಕಾಗಿತ್ತು. ಏಕೆಂದರೆ ಇದು ರಾಜಕಾರಣ. ಅವರು ಕೂಡ ನಮ್ಮಂತೆಯೇ ಶಾಸಕರು. ಯಾವುದೋ ಶಿಕ್ಷೆ ಕೊಡುವ ಕೋರ್ಟ್ ಅಲ್ಲ. ಅಲ್ಲಿ ನಮ್ಮ ರಾಜೀನಾಮೆ ವಿಚಾರ ಹೆಚ್ಚು ಪ್ರಸ್ತಾಪ ಆಗಿಲ್ಲ. ಇದು ಬಹಳ ಅವಸರದಲ್ಲಿ ಅನರ್ಹತೆಯ ಆಧಾರದ ಮೇಲೆ ತೀರ್ಪು ನೀಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರದ್ದು ಅವಸರದ ತೀರ್ಪು ಎಂದು ನನಗನ್ನಿಸುತ್ತಿದೆ. ಸುಪ್ರೀಂಕೋರ್ಟ್ನಲ್ಲಿ ನಮ್ಮ ವಾದವನ್ನು ನಾವು ಮಂಡಿಸುತ್ತೇವೆ''ಎಂದು ಸಮ್ಮಿಶ್ರ ಸರಕಾರದ ವಿರುದ್ಧ ಬಂಡಾಯ ಎದ್ದು ಇಂದು ಅನರ್ಹಗೊಂಡಿರುವ 14 ಅತೃಪ್ತ ಶಾಸಕರ ಪೈಕಿ ಒಬ್ಬರಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.
Comments
Post a Comment