ಇಡೀ ವಿಶ್ವದಲ್ಲಿಯೇ ಕೋಟ್ಯಂತರ ಭಕ್ತರು ಕರ್ನಾಟಕ ರಾಜ್ಯವನ್ನು ಧರ್ಮಸ್ಥಳ ಎಂಬ ಪವಿತ್ರ ಕ್ಷೇತ್ರವನ್ನು ಹೊಂದಿರುವ ರಾಜ್ಯ ಎಂದು ಗುರುತಿಸುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇನ್ನು ಧರ್ಮಸ್ಥಳ ಕ್ಷೇತ್ರವನ್ನು ಹಲವಾರು ವರ್ಷಗಳಿಂದಲೂ ಹೆಗಡೆರವರ ಕುಟುಂಬ ಮುನ್ನಡೆಸುತ್ತಾ ಸಾಗುತ್ತಿದೆ. ನಿತ್ಯ ಸಾವಿರಾರು ಭಕ್ತರಿಗೆ ಅನ್ನದಾನ ಮಾಡುವ ಈ ಪವಿತ್ರ ಕ್ಷೇತ್ರ ಇಡೀ ವಿಶ್ವದಲ್ಲಿ ತನ್ನದೇ ಆದ ಮನ್ನಣೆ ಪಡೆದುಕೊಂಡಿದೆ. ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ರವರು, ಮತ್ತೊಂದು ಅಭಿಯಾನದ ಕರೆ ನೀಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಧರ್ಮಸ್ಥಳದಲ್ಲಿ ನೀರಿನ ಬವಣೆ ಕಂಡುಬಂದ ಕಾರಣ ನೀರಿನ್ನು ಸಂರಕ್ಷಿಸಲು ಮನವಿ ಮಾಡಿಕೊಂಡಿದ್ದ ವೀರೇಂದ್ರ ಹೆಗಡಿ ರವರು ಇದೀಗ ಮತ್ತೊಂದು ಮನವಿ ಮಾಡಿಕೊಂಡಿದ್ದಾರೆ.
ಇದೀಗ ಎಲ್ಲಿ ನೋಡಿದರೂ ಮಳೆಗಾಲ ಇರುವ ಕಾರಣ ಸೊಳ್ಳೆಗಳು ಹೆಚ್ಚಾಗುತ್ತಿವೆ, ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಸೊಳ್ಳೆಗಳು ಕಾಣಸಿಗುತ್ತಿವೆ. ಸುತ್ತಲೂ ಕಾಡು, ಮಳೆ ಎಲ್ಲದರ ನಡುವೆ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸದ ಕಾರಣ ಮನುಷ್ಯನಿಗೆ ಮಾರಕವಾಗಿರುವ ಡೆಂಗ್ಯೂ ಹಾವಳಿ ಮಿತಿ ಮೀರುತ್ತಿದೆ. ಇದೇ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಕರೆ ನೀಡಿರುವ ವೀರೇಂದ್ರ ಹೆಗಡೆ ರವರು, ಅಕ್ಷರಸ್ಥರು ಹಾಗೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿರುವ ಪ್ರಜ್ಞಾವಂತರು ಹೆಚ್ಚಿರುವ ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ, ಈ ಕೂಡಲೇ ಜನತೆ ಎಚ್ಚೆತ್ತುಕೊಳ್ಳಬೇಕು. ತಮ್ಮ ಮನೆ ಹಾಗೂ ಕಟ್ಟಡದ ಪರಿಸರದಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಿ, ಸ್ವಚ್ಛತೆಯ ಕಡೆ ಗಮನ ನೀಡಿದರೆ ಡೆಂಗ್ಯೂ ಹಾವಳಿ ನಿಲ್ಲಿಸಬಹುದು. ಇದರಿಂದಾಗಿ ಸಾವು ಸಂಭವಿಸುತ್ತಿರುವಾಗ ಎಚ್ಚೆತ್ತು ಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
source: karunadavani
source: karunadavani
Comments
Post a Comment