ಅದೊಂದು ಕಾಲವಿತ್ತ. ಭಾರತೀಯ ಜನತಾ ಪಕ್ಷವೆಂದರೆ ಇಲ್ಲಿ (ಕರ್ನಾಟಕ) ಮೂಸಿಯೂ ನೋಡುವವರಿರಲಿಲ್ಲ. ಚುನಾವಣೆ ಬಂತೆಂದತೆ ಪ್ರಚಾರ ಮಾಡುವವರು ಬಿಡಿ, ಸ್ವತಃ ಸ್ಪರ್ಧಿಸೋರೂ ಇರಲಿಲ್ಲ. ಇಂತಹಾ ಸಮಯದಲ್ಲಿ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಕೆಲಸ ಮಾಡಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭಾ ಕ್ಷೇತ್ರವೊಂದರಲ್ಲಿ ಕಮಲದ ಧ್ವಜ ಹರಿಸಿದ ಕೀರ್ತಿ ಯಾರಿಗಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಸಲ್ಲುತ್ತದೆ.
ನಂತರ ನಡೆದದ್ದೇ ಇತಿಹಾಸ. ರಾಜ್ಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿ, ಪ್ರತಿ ಜಿಲ್ಲೆ ಹಾಗೂ ವಿಧಾನ ಸಭಾ ಕ್ಷೇತ್ರಗಳಿಗೂ ತೆರಳಿ ಪಕ್ಷ ಸಂಘಟನೆಗೆ ಒತ್ತು ನೀಡಿ ಭಾರತೀಯ ಜನತಾ ಪಕ್ಷವನ್ನು ಸಧೃಢವಾಗಿ ಬೆಳೆಸಿದವರು ಬಿಎಸ್ ಯಡಿಯೂರಪ್ಪನವರು. ಎಲ್ಲಿವರೆಗೆಂದರೆ ಕರ್ನಾಟಕದಲ್ಲಿ ಭಾರತೀಯ ಜನತ ಪಕ್ಷದ ಸರ್ಕಾರ ರಚಿಸುವವರೆಗೂ.
ಇತ್ತೀಚೆಗೆ ನಡೆದಿದ್ದ ವಿಧಾನ ಸಭಾ ಚುನಾವಣೆಯ ಸಾರಥ್ಯವನ್ನೂ ಯಡಿಯೂರಪ್ಪನವರು ವಹಿಸಿಕೊಂಡು ಅದ್ಭುತ ಸಾಮಾರ್ಥ್ಯವನ್ನೇ ತೋರಿಸಿದ್ದರು. ರಾಜ್ಯದಲ್ಲಿ ಕಳೆಗುಂದಿದ್ದ ಪಕ್ಷವನ್ನು ಮತ್ತೆ ನಂಬರ್ ವನ್ ಗದ್ದುಗೆಗೆ ಏರಿಸುವ ಪ್ರಯತ್ನ ಮಾಡಿ ಅದರಲ್ಲಿ ಸಫಲರೂ ಆಗಿದ್ದರು. ಆದರೆ ವಿರೋಧ ಪಕ್ಷಗಳ ವಚನ ಭ್ರಷ್ಟ ರಾಜಕೀಯ ನೀತಿಯಿಂದಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಅದರಲ್ಲಿ ಸಫಲತೆ ಕಾಣಲು ಸಾಧ್ಯವಾಗಿಲ್ಲ.
ಆದರೆ ಇದೀಗ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿಎಸ್ ಯಡಿಯೂರಪ್ಪನವರು ಮತ್ತೊಂದು ಸ್ಥಾನವನ್ನು ಅಲಂಕರಿಸಲು ಸಜ್ಜಾಗಿದ್ದಾರೆ. ಪ್ರತಿಪಕ್ಷವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷ ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಮಿತಿಯ ನಾಯಕನಾಗಿರುವ ಯಡಿಯೂರಪ್ಪನವರನ್ನು ವಿರೋಧ ಪಕ್ಷದ
ಕಳೆದ ಬಾರಿ ಪ್ರತಿಪಕ್ಷ ಬಿಜೆಪಿ ಅತ್ಯಲ್ಪ ಮತಗಳಿದ್ದ ಕಾರಣ ವಿಧಾನಸಭೆಯಲ್ಲಿ ಸೆಣಸಲು ಕಷ್ಟವಾಗುತ್ತಿತ್ತು. ಆದರೆ ಈ ಬಾರಿ 104 ಸದಸ್ಯರುಳ್ಳ ಭಾರತೀಯ ಜನತಾ ಪಕ್ಷಕ್ಕೆ ಯಡಿಯೂರಪ್ಪನವರ ಬಲವೂ ಸಿಕ್ಕಿದೆ. ಇನ್ನು ಮುಂದೆ ಯಡಿಯೂರಪ್ಪನವರು ವಿಧಾನ ಸಭೆಯಲ್ಲಿ ಘರ್ಜಿಸುವುದನ್ನು ಆಡಳಿತ ಪಕ್ಷಗಳು ಕಣ್ಣು ಕೆಂಪಗೆ ಮಾಡಿ ನೋಡಬೇಕಾದ ಅನಿವಾರ್ಯತೆಯೂ ಉಂಟಾಗಲಿದೆ ಎಂದರೆ ಸುಳ್ಳಲ್ಲ.
Comments
Post a Comment