ಬಿಗ್ ನ್ಯೂಸ್: ಬಿಜೆಪಿಗೆ ಸೇರ್ಪಡೆಯಾದ ಪ್ರಭಾವಿ ನಾಯಕ, ವಿರೋಧಿಗಳ ಮನದಲ್ಲಿ ನಡುಕ.?

ತೆಲುಗು ದೇಶಂ ಪಕ್ಷ(ಟಿಡಿಪಿ)ದ ವಕ್ತಾರ ಲಂಕಾ ದಿನಕರ್ ಬುಧವಾರ ಪಕ್ಷವನ್ನು ತ್ಯಜಿಸಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಹೊಸದಿಲ್ಲಿಯಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಬಿಜೆಪಿಯನ್ನು ಸೇರ್ಪಡೆಯಾದರು. ಲಂಕಾ ದಿನಕರ್ ತನ್ನ ರಾಜೀನಾಮೆಯನ್ನು ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡುಗೆ ಸಲ್ಲಿಸಿದರು.

ನನ್ನ ಕುಟುಂಬ ಸದಸ್ಯರ ಒಮ್ಮತದ ನಿರ್ಧಾರದಂತೆ ನಾನು ಟಿಡಿಪಿಯ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೂ, ಪಕ್ಷದ ಪ್ರಾಥಮಿಕ ಸದಸ್ವತ್ವಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ದಿನಕರ್ ತಿಳಿಸಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಲೋಕದಳದ ರಾಜ್ಯಸಭಾ ಸದಸ್ಯ ರಾಮಕುಮಾರ್ ಕಶ್ಯಪ್ ಹಾಗೂ ಕೇರಳದ ಎಪಿ ಅಬ್ದುಲ್ಲಾಕುಟ್ಟಿ ಕೂಡ ಬಿಜೆಪಿಗೆ ಸೇರ್ಪಡೆಯಾದರು. ಈ ಹಿಂದೆ ಟಿಡಿಪಿಯ ಮೂವರು ರಾಜ್ಯಸಭಾ ಸದಸ್ಯರುಗಳು ಬಿಜೆಪಿಗೆ ಸೇರ್ಪಡೆಯಾಗಿದ್ದರು.


Comments