ಮಹಿಳಾ ಸುರಕ್ಷತೆಗೆ ವಿಶೇಷ ನಿರ್ಧಾರ ಕೈಗೊಂಡು ಕೇಜ್ರಿವಾಲ್ ಗೆ ಟಾಂಗ್ ಕೊಟ್ಟ ದೆಹಲಿ ಸಂಸದ ಗೌತಮ್ ಗಂಭೀರ್.?

ಗೌತಮ್ ಗಂಭಿರ್ ಭಾರತೀಯ ಕ್ರೀಡಾಪಟು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಮೈದಾನದಲ್ಲಿ ಎಷ್ಟು ಸುಲಭವಾಗಿ ಬೌಂಡರಿ ಸಿಕ್ಸರ್ ಗಳನ್ನು ಬಾರಿಸುತ್ತಿದ್ದರೋ ಅಷ್ಟೇ ಸುಲಭವಾಗಿ ಇದೀಗ ಮಾತುಗಳ ಮೂಲಕ ಎದುರಾಳಿ ಪಕ್ಷದ ನಾಯಕರಿಗೆ ತಕ್ಕ ತಿರುಗೇಟು ನೀಡುತ್ತಾ ಬಂದಿದ್ದರು. ಇಷ್ಟು ದಿವಸ ಕೇವಲ ಸಾಮಾನ್ಯ ರಾಜಕೀಯ ನಾಯಕನಾಗಿ ತಿರುಗೇಟು ನೀಡುತ್ತಿದ್ದ ಗೌತಮ್ ಗಂಭೀರ್ ಅವರು ಇದೀಗ ಪೂರ್ವ ದೆಹಲಿಯ ಸಂಸದರಾಗಿ ಆಯ್ಕೆಯಾದ ಮೇಲೆ ಕೆಲಸಗಳ ಮೂಲಕ ಟಾಂಗ್ ನೀಡಲು ಆರಂಭಿಸಿದ್ದಾರೆ. ಇತ್ತೀಚಿಗೆ ಮಹಿಳೆಯರ ಸುರಕ್ಷತೆಗಾಗಿ ದೆಹಲಿ ಮುಖ್ಯಮಂತ್ರಿ ಗಳಾಗಿರುವ ಅರವಿಂದ ಕೇಜ್ರಿವಾಲ್ ಅವರು ಉಚಿತ ಮೆಟ್ರೋ ಪ್ರಯಾಣ ಎಂಬ ಯೋಜನೆಯನ್ನು ಘೋಷಣೆ ಮಾಡಿದ್ದರು.

ಈ ಯೋಜನೆಗೆ ಹಲವಾರು ಜನರ ವಿರೋಧ ಕೇಳಿ ಬಂದಿತ್ತು, ಅಷ್ಟೇ ಯಾಕೆ ದೆಹಲಿಯಲ್ಲಿರುವ ಬಹುತೇಕ ಮಹಿಳೆಯರು ಸಹ ಈ ಯೋಜನೆಯ ವಿರುದ್ಧ ಕಿಡಿಕಾರಿದ್ದರು. ದೆಹಲಿಯಲ್ಲಿ ಬಹುತೇಕ ಮಂದಿ ತಿಂಗಳಿಗೆ ಸಾವಿರಾರು ರೂಗಳನ್ನು ದುಡಿಯುತ್ತಾರೆ, ಹೀಗೆ ದುಡಿಯುವ ಮಹಿಳೆಯರಿಗೆ ಉಚಿತ ಮೆಟ್ರೊ ಪ್ರಯಾಣದಿಂದ ಯಾವುದೇ ಲಾಭವಿಲ್ಲ, ಅಷ್ಟೇ ಅಲ್ಲದೆ ಇದನ್ನು ಸುರಕ್ಷತೆಯ ವಿಷಯಕ್ಕಾಗಿ ಜಾರಿ ಮಾಡುತ್ತಿದ್ದೇವೆ ಎಂದು ಕೇಜ್ರಿವಾಲ್ ಅವರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಉಚಿತ ಪ್ರಯಾಣಕ್ಕೂ ಮಹಿಳೆಯರ ರಕ್ಷಣೆಗೂ ಯಾವ ರೀತಿಯ ಸಂಬಂಧ ಎಂದು ಕಿಡಿಕಾರಿದ್ದರು. ಇದೀಗ ಇದೇ ವಿಷಯವಾಗಿ ಸಂಸದ ಗೌತಮ್ ಗಂಭೀರ್ ಅವರು ಹೊಸ ಯೋಜನೆಯನ್ನು ಜಾರಿಗೆ ತಂದು ಮಹಿಳೆಯರ ಸುರಕ್ಷತೆ ಬಗ್ಗೆ ಯಾವ ರೀತಿಯ ಕ್ರಮಗಳು ಅಗತ್ಯ ಎಂಬುದನ್ನು ತೋರಿಸುವ ಮೂಲಕ ಟಾಂಗ್ ನೀಡಿದ್ದಾರೆ.

ಇದೀಗ ತಾವು ಗೆದ್ದು ಬಂದಿರುವ ಪೂರ್ವ ದೆಹಲಿಯ ಬೀದಿಬೀದಿಗಳಲ್ಲಿ, ಅಗತ್ಯವಿರುವ ಪ್ರದೇಶಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಘಾತುಕರ ಕೈಯನ್ನು ಕಟ್ಟಿಹಾಕಲು ವಿಶೇಷ ಕ್ಲಾರಿಟಿ ಯುಳ್ಳ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಗೌತಮ್ ಗಂಭೀರ್ ಅವರು ನಿರ್ಧಾರ ಮಾಡಿದ್ದಾರೆ. ಗೌತಮ್ ಗಂಭೀರ್ ಅವರ ತಂಡವು ಪೂರ್ವ ದೆಹಲಿಯ ಡಿಸಿಪಿ ಜಸ್ಮೀತ್ ಸಿಂಗ್ ರವರನ್ನು ಭೇಟಿ ಮಾಡಿ, ಸೂಕ್ಷ್ಮ ಪ್ರದೇಶಗಳ ವಿವರಗಳನ್ನು ತರಿಸಿಕೊಂಡು ಇದೀಗ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಮುಂದಾಗಿದೆ. ಗೌತಮ್ ಗಂಭೀರ್ ಅವರ ಈ ನಡೆಗೆ ಭಾರಿ ಪ್ರಶಂಸೆಗಳು ವ್ಯಕ್ತವಾಗಿದ್ದು, ಮಹಿಳೆಯರ ಸುರಕ್ಷತೆಗೆ ಈ ರೀತಿಯ ಇನ್ನಷ್ಟು ಕ್ರಮಗಳು ಅಗತ್ಯ ಎಂದು ನೆಟ್ಟಿಗರು ಭೇಷ್ ಎಂದಿದ್ದಾರೆ. ಈ ಕಾರ್ಯಕ್ರಮದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.
Source:KarunadaVani

Comments