ಸ್ಪೋಟಕ ಬ್ರೇಕಿಂಗ್: ಶಿವು ಉಪ್ಪಾರ್ ಸಾವಿನ ನ್ಯಾಯಕ್ಕಾಗಿ ಹೊಸ ಅಂದೋಲನಕ್ಕೆ ಕರೆ ನೀಡಿದ ಪ್ರಮೋದ್ ಮುತಾಲಿಕ್.?

ಗೋ ರಕ್ಷಕ ಶಿವು ಉಪ್ಪಾರ್ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಜುಲೈ 8 ರಂದು ಬೆಳಗಾವಿ ಚಲೋ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಗೋ ರಕ್ಷಕ ಶಿವು ಉಪ್ಪಾರ್ ಸಾವು ಆತ್ಮಹತ್ಯೆಯಿಂದ ಆಗಿದಲ್ಲ, ಅವನನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು . ಈ ಬಗ್ಗೆ ಎಲ್ಲಾ ಸಾಕ್ಷಿಗಳಿದ್ದರೂ ಕೂಡ ಆರೋಪಿಗಳನ್ನು ಯಾಕೆ ಬಂಧಿಸುತ್ತಿಲ್ಲ..? ಎಂದು ಕಿಡಿಕಾರಿದರು.

ಗೋ ರಕ್ಷಕ ಶಿವು ಉಪ್ಪಾರ್ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಜುಲೈ 8 ರಂದು ಬೆಳಗಾವಿ ಚಲೋ ಕಾರ್ಯಕ್ರಮ ನಡೆಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದು ಹೋರಾಟ ನಡೆಸುತ್ತೇವೆ. ಜುಲೈ 8 ಕ್ಕೆ ಶ್ರೀರಾಮ ಸೇನೆ ನೇತೃತ್ವದಲ್ಲಿ ಎಲ್ಲಾ ಸಂಘಟನೆಗಳು ಸೇರಿ ಬೆಳಗಾವಿ ಚಲೋ ಹಮ್ಮಿಕೊಂಡಿದ್ದು, 25 ಕ್ಕೂ ಹೆಚ್ಚು ಕಾರ್ಯಕರ್ತರಿಂದ ಕೇಂದ್ರ ಸಚಿವ ಸುರೇಶ್ ಅಂಗಡಿಗೆ ಘೇರಾವ್ ಹಾಕಲಾಗುವುದು ಎಂದರು.

Comments