ಕಾಶ್ಮೀರಿ ದೇಶದ್ರೋಹಿಗಳಿಗೆ ಮರ್ಮಾಘತ.! ಸೈನಿಕರಿಗೆ ವಿಶೇಷ ಅಸ್ತ್ರ ನೀಡಲು ಮುಂದಾದ ಅಮಿತ್ ಶಾ.!

ಎಲ್ಲರೂ ಊಹಿಸಿದಂತೆಯೇ ಅಮಿತ್ ಶಾ ರವರು ಇದೀಗ ದೇಶ ಭದ್ರತೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊದಲಿನಿಂದಲೂ ದೇಶದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ಅಮಿತ್ ಶಾ ರವರು ತಮ್ಮ ಮಾತುಗಳ ಮೂಲಕ ದೇಶದ್ರೋಹಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡುತ್ತಿದ್ದರು. ಇನ್ನು ಗೃಹ ಸಚಿವರಾದ ಮೇಲೆ ಕೇಳಬೇಕಾ? ಈಗಾಗಲೇ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಮಸೂದೆಯನ್ನು ಮಂಡಿಸಲು ತಯಾರಾಗಿದ್ದಾರೆ. ಅಷ್ಟರಲ್ಲಾಗಲೇ ಇದೀಗ ಸೈನಿಕರಿಗೆ ವಿಶೇಷ ಅಸ್ತ್ರವನ್ನು ನೀಡಿ ಇನ್ನು ಮುಂದೆ ಕಾಶ್ಮೀರದಲ್ಲಿ ನೆಲೆಸಿರುವ ದೇಶದ್ರೋಹಿಗಳ ಹೆಡೆಮುರಿಕಟ್ಟಲು ಸಿದ್ಧರಾಗುವಂತೆ ತಿಳಿಸಿದ್ದಾರೆ. ಅಷ್ಟಕ್ಕೂ ಆ ವಿಶೇಷ ಅಸ್ತ್ರ ಯಾವುದು ಗೊತ್ತಾ? ಹಾಗೂ ಅದರ ಲಾಭಗಳೇನು ಗೊತ್ತಾ??

ಕಾಶ್ಮೀರದಲ್ಲಿ ಭಯೋತ್ಪಾದಕರ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ದೇಶ ದ್ರೋಹಿಗಳು ಭಾರತೀಯ ಸೇನೆಯ ವಿರುದ್ಧ ಕಲ್ಲುತೂರಾಟ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಷ್ಟೇ ಅಲ್ಲದೆ ಭಾರತ ನನ್ನ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾಗರಿಕರೊಂದಿಗೆ ಅನುಚಿತವಾಗಿ ವರ್ತನೆ ಮಾಡಿ ಭದ್ರತಾ ಸಿಬ್ಬಂದಿಗಳು ಪ್ರಶ್ನೆ ಮಾಡಲು ತೆರಳಿದರೆ, ಕಲ್ಲಿನಿಂದ ಹೊಡೆದು ಕಾಲು ಕೀಳುತ್ತಿದ್ದರು, ಕೆಲವು ಹೇಡಿ ನಾಯಿಗಳು. ಹೀಗಿರುವಾಗ ಗುಂಪುಗಳನ್ನು ಚದುರಿಸಲು ಇಷ್ಟು ದಿವಸ ಭದ್ರತಾ ಸಿಬ್ಬಂದಿಗಳು ಪೆಲೆಟ್ ಬಂದೂಕನ್ನು ಬಳಸಬೇಕಾಗಿತ್ತು. ಈ ಗನ್ ಗಳಿಂದ ದೇಶದ್ರೋಹಿಗಳಿಗೆ ಆಗುತ್ತಿದ್ದ ನೋವು ಅಷ್ಟಕಷ್ಟೇ. ಒಂದು ವೇಳೆ ಕಣ್ಣಿನಂತಹ ಸೂಕ್ಷ್ಮ ಪ್ರದೇಶಗಳಿಗೆ ತಾಕಿದರೆ ಮಾತ್ರ ಹೆಚ್ಚು ಅಪಾಯಕಾರಿಯಾಗುತ್ತಿತ್ತು ಇಲ್ಲವಾದರೆ ಚಿಕ್ಕ ಚಿಕ್ಕ ಗಾಯಗಳಾಗುತ್ತಿದ್ದವು.

ಇದರಿಂದ ಕಲ್ಲುತೂರಾಟ ಗಾರರನ್ನು ನಿರ್ವಹಣೆ ಮಾಡುವುದು ಬಹಳ ಕ್ಲಿಷ್ಟಕರವಾದ ಸಂಗತಿ ಎಂಬುದು ಎಲ್ಲರಿಗೂ ತಿಳಿದಿತ್ತು. ಇದೀಗ ಇದೇ ಕಾರಣಕ್ಕಾಗಿ ಕೇಂದ್ರ ಗೃಹ ಸಚಿವಾಲಯವು ಕಾಶ್ಮೀರದ ಭದ್ರತಾ ಸಿಬ್ಬಂದಿಗಳಿಗೆ ವಿಶೇಷ ಆಯುಧವನ್ನು ಒದಗಿಸಲು ಮುಂದಾಗಿದೆ. ಆ ಅಸ್ತ್ರದ ಹೆಸರೇ ಎಲ್ ಆರ್ ಎ ಡಿ, ಅಂದರೆ ಲಾಂಗ್ ರೆಂಚ್ ಅಕೌಸ್ಟಿಕ್ ಡಿವೈಸ್, ಇದನ್ನು ಸೌಂಡ್ ಫಿರಂಗಿ ಎಂದು ಕರೆಯಲಾಗುತ್ತದೆ, ಯಾಕೆಂದರೆ ಇದು ಕಲ್ಲು ತೂರಾಟಗಾರರ ಜನಸಮೂಹದಲ್ಲಿ ಬಾರಿ ಧ್ವನಿ ತರಂಗಗಳನ್ನು ಹೊರಸೂಸುತ್ತದೆ. ಬಹುಶಹ ನೀವು ಹಾಲಿವುಡ್ ನ ಕೆಲವು ಚಿತ್ರಗಳಲ್ಲಿ ಆಯುಧವನ್ನು ನೀವು ನೋಡಿರುತ್ತೀರಿ,( ಹಲ್ಕ್ ಎಂಬ ಸೂಪರ್ ಹೀರೋ ಸಿನಿಮಾದಲ್ಲಿ ಈ ಆಯುಧವನ್ನು ಬಳಸಲಾಗಿದೆ.)

ಈ ಧ್ವನಿ ತರಂಗಗಳನ್ನು ಕಲ್ಲುತೂರಾಟ ಗಾರರು ಕೇಳಲಾಗದೆ ಸ್ಥಳದಿಂದ ಬೇರೆ ವಿಧಿ ಇಲ್ಲದೆ ಓಡಲು ಆರಂಭಿಸುತ್ತಾರೆ. ಒಂದುವೇಳೆ ಕೆಲವು ಸೆಕೆಂಡುಗಳ ಕಾಲ ಈ ಧ್ವನಿ ತರಂಗಗಳನ್ನು ಕೇಳಿಸಿಕೊಂಡಲ್ಲಿ ಶಾಶ್ವತವಾಗಿ ಕಿವುಡರಾಗಿ ಬದುಕಬೇಕಾಗುತ್ತದೆ. ಈ ಧ್ವನಿ ತರಂಗಗಳಿಂದ ತನ್ನ ಶಬ್ದ ಗ್ರಹಿಸುವ ಸಾಮರ್ಥ್ಯವನ್ನು ಕಳೆದುಕೊಂಡಲ್ಲಿ, ಇನ್ಯಾವುದೇ ವೈದ್ಯಕೀಯ ಶಕ್ತಿಯು ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಸಂಪೂರ್ಣವಾಗಿ ತನ್ನ ಜೀವನ ಪರ್ಯಂತ ಕಿವುಡರಾಗಿ ಕಾಲ ಕಳೆಯಬೇಕಾಗುತ್ತದೆ. ಇದೇ ಅಂಶವನ್ನು ಗಮನಿಸಿ ಇದೀಗ ಗೃಹಸಚಿವಾಲಯವು ಕಾಶ್ಮೀರದ ಭದ್ರತಾ ಪಡೆಗಳಿಗೆ ಈ ಆಯುಧವನ್ನು ಕೂಡಲೇ ಖರೀದಿ ಮಾಡಿ ಕಲ್ಲು ತೂರಾಟಗಾರರ ವಿರುದ್ಧ ಬಳಸಲು ಆದೇಶ ನೀಡಿದೆ. ವಿಪರ್ಯಾಸವೆಂದರೆ ಈ ಆದೇಶ ಹೊರಬಿದ್ದು ಎರಡು ದಿನಗಳಾದರೂ ಸಹ, ಕನ್ನಡದ ಯಾವುದೇ ಪ್ರತಿಷ್ಠಿತ ಸುದ್ದಿವಾಹಿನಿಗಳು ಇದರ ಬಗ್ಗೆ ತೋರಿಸಿಯೇ ಇಲ್ಲ, ದಯವಿಟ್ಟು ಈ ಸುದ್ದಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ.

Source: KarunadaVani

Comments