ಅನಂತ್ ಕುಮಾರ್ ಕಚೇರಿ ಬೇಡವೆಂದ ತೇಜಸ್ವಿ ಸೂರ್ಯ ಯಾಕೆ ಗೊತ್ತಾ.!

ಕೊನೆ ಕ್ಷಣದಲ್ಲಿ ಟಿಕೆಟ್ ಪಡೆದು ಭರ್ಜರಿ ಗೆಲುವನ್ನು ಸಾಧಿಸಿದ ಹಾಲಿ ಸಂಸದ ತೇಜಸ್ವಿ ಸೂರ್ಯಗೆ, ಮಾಜಿ ಸಂಸದ ದಿವಂಗತ ಅನಂತ್ ಕುಮಾರ್ ಕಚೇರಿ ಬೇಡವಂತೆ. ತಮಗೆ ಹೊಸ ಕಚೇರಿಯನ್ನ ನೀಡಿ ಅಂತ ಬಿಬಿಎಂಪಿ ಆಯುಕ್ತರ ಮೊರೆ ಹೋಗಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು ದಕ್ಷಿಣ ಕೇಂದ್ರ ಅನಂತ್​ ಕುಮಾರ್​ ಪಾಲಿನ ಭದ್ರಕೋಟೆಯಾಗಿತ್ತು. ಇವರ  ಮುಂದೆ ನಿಂತು ಗೆಲ್ಲೊಲ್ಲ ಅನ್ನೋದು ವಿಪಕ್ಷಗಳಿಗೂ ಗೊತ್ತಿತ್ತು. ಹೀಗಾಗಿಯೇ ಜಯನಗರದ ಸೌತ್ ಎಂಡ್ ಸರ್ಕಲ್‌ನಲ್ಲಿ ಅನಂತ್ ಕುಮಾರ್ ಕಚೇರಿ ತೆರೆದಿದರು. ಇರುವಷ್ಟು ದಿನ ಇಲ್ಲೇ ಇದ್ದು ಜನರ ಕಷ್ಟಸುಖ ಆಲಿಸ್ತಿದರು. ಆದ್ರೀಗ ನೂತನ ಸಂಸದ ತೇಜಸ್ವಿ ಸೂರ್ಯಗೆ ಈ ಕಚೇರಿ ಬೇಡವಾಗಿದ್ಯಂತೆ. ನನಗೆ ಹೊಸದೊಂದು ಕಚೇರಿ ಕೊಡಿ ಅಂತ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್​ಗೆ ಮನವಿ ಮಾಡಿದ್ದಾರೆ. ಸಂಸದರ ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ನೂತನ ಸಂಸದರನ್ನು ಕೇಳಿದರೆ ಹೇಳೋದೇ ಬೇರೆ. ಜಯನಗರ ಕ್ಷೇತ್ರ ಮದ್ಯಭಾಗದಲ್ಲಿದೆ. ಹೀಗಾಗಿ ಶಾಲಿನಿಗ್ರೌಂಡ್ಸ್ ಎದುರಿನ ಕಟ್ಟಡದಲ್ಲಿ ಕಚೇರಿ ಕೊಡುವಂತೆ ಪತ್ರ ಬರೆದಿದ್ದೇನೇ ಎಂದಿದ್ದಾರೆ. ಆದರೆ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್​ ಮಾತ್ರ ಕಡ್ಡಿ ತುಂಡಾದಂತೆ ಸ್ಪಷ್ಟನೆ ನೀಡಿದ್ದಾರೆ. ಸಂಸದರಿಗೆ ಕಚೇರಿ ನೀಡೋದು ರಾಜ್ಯ ಸರ್ಕಾರದ ಕೆಲಸ, ಬಿಬಿಎಂಪಿಗೆ ಯಾವುದೇ ಕಚೇರಿ ನೀಡಲು ಬರೋದಿಲ್ಲ. ಬೇಕಿದರೆ ಅನಂತ್​ ಕುಮಾರ್ ಅವರ ಕಚೇರಿಯನ್ನೇ ಬಳಸಿಕೊಳ್ಳಲಿ ಎಂದಿದ್ದಾರೆ.

Source: One India

Comments