ಬಿಗ್ ನ್ಯೂಸ್: ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರದ ಮೂಲಕ ಖಾರವಾಗಿ ಪ್ರಶ್ನಿಸಿದ ಸ್ಪೀಕರ್ ರಮೇಶ್ ಕುಮಾರ್.?

ಕಳೆದ ಒಂದು ವರ್ಷದ ಅವಧಿಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳ ಕಾಲ ಯಶಸ್ವಿ ಆಡಳಿತ ನೀಡಿದ್ದೀರಿ. ಆದರೆ ಈ ಬಾರಿ ಆದರೆ ಈ ಒತ್ತಡವನ್ನ ಸಮರ್ಪಕವಾಗಿ ನಿರ್ವಹಿಸುವಲ್ಲಿ ನೀವು ಎಡವುತ್ತಿದ್ದೀರಾ ಅನ್ನೋದು ನನ್ನ ಭಾವನೆ ಎಂದು ಪತ್ರ ಬರೆದಿದ್ದಾರೆ.

ಸ್ಪೀಕರ್ ಪತ್ರದಲ್ಲೇನಿದೆ?
ಕಳೆದ ಒಂದು ವರ್ಷದಿಂದ ರಾಜ್ಯ ಸಮ್ಮಿಶ್ರ ಸರ್ಕಾರದ ಜವಾಬ್ದಾರಿಯನ್ನ ಹೊತ್ತು ತಾವು ಸರ್ಕಾರವನ್ನ ನಡೆಸುತ್ತಿದ್ದೀರಿ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನ ಮತ್ತು ಎಲ್ಲವನ್ನ ಸರಿದೂಗಿಸಿಕೊಂಡು ಹೋಗಬೇಕಾದ ಒತ್ತಡದ ಸನ್ನಿವೇಶದಲ್ಲಿ ನೀವು ಸರ್ಕಾರವನ್ನ ಮುನ್ನಡೆಸುತ್ತಿದ್ದೀರಿ ಅನ್ನುವುದು ನನಗೆ ಗೊತ್ತು. ಆದರೆ ಈ ಒತ್ತಡವನ್ನ ಸಮರ್ಪಕವಾಗಿ ನಿರ್ವಹಿಸುವಲ್ಲಿ ನೀವು ಎಡವುತ್ತಿದ್ದೀರಾ ಅನ್ನೋದು ನನ್ನ ಭಾವನೆ. ಈ ಹಿಂದೆಯೂ ತಾವು ಸಮ್ಮಿಶ್ರ ಸರ್ಕಾರವನ್ನ ಯಶಸ್ವಿಯಾಗಿ 20 ತಿಂಗಳುಗಳ ಕಾಲ ನಡೆಸಿದವರು. ಆ ಮೂಲಕ ರಾಜ್ಯದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದವರು ನೀವು. ಆದರೆ ಈ ಬಾರಿಯ ಸರ್ಕಾರದಲ್ಲಿ ನಿಮ್ಮ ಆಡಳಿತ ನೈಪುಣ್ಯತೆಯಾಗಲಿ, ಜನಪ್ರಿಯತೆಯಾಗಲಿ ಯಾವುದು ನನಗೆ ಕಾಣಿಸಲಿಲ್ಲ. ನೀವು ಮುಖ್ಯಮಂತ್ರಿಯಾಗಿ ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು. ಅದರಲ್ಲೂ ಸಮ್ಮಿಶ್ರ ಸರ್ಕಾರದ ನಾಯಕನಾಗಿ ನೀವು ಇನ್ನು ಹೆಚ್ಚು ಡೆಮಾಕ್ರಟಿಕ್ ಆಗಿ ವರ್ತಿಸಬೇಕು ಅನ್ನೋದು ನನ್ನ ಅಭಿಪ್ರಾಯ. ನಿಮ್ಮ ಆಡಳಿತ ವೈಖರಿ ಹಾಗೂ ಸಾರ್ವಜನಿಕವಾದ ಕೆಲವೊಂದು ನಡೆಗಳು ನಿಮ್ಮ ಬಗ್ಗೆ ಅಪಾರ ಗೌರವ ಇಟ್ಟಿರುವ ನನಗೆ ಅಷ್ಟೊಂದು ಸಮಂಜಸ ಅನ್ನಿಸಲಿಲ್ಲ. ಇದು ನನ್ನ ವೈಯುಕ್ತಿಕ ಅಭಿಪ್ರಾಯವೇ ಹೊರತು ಅನ್ಯತ ಭಾವಿಸಬಾರದು ಅನ್ನೋದು ನನ್ನ ಕಳಕಳಿಯ ಮನವಿ ಎಂದು ತಿಳಿಸಿದ್ದಾರೆ.

ಇರುವ ವಿಚಾರವನ್ನು ನೇರವಾಗಿ ಹೇಳುವ ರಮೇಶ್ ಕುಮಾರ್ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸದನಲ್ಲಿ ಸರ್ಕಾರದ ಮಂತ್ರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರ ಹಾಕಿ ಬಹಿರಂಗವಾಗಿಯೇ ಟೀಕಿಸುತ್ತಿದ್ದರು. ಈಗ ರಾಜ್ಯ ದೋಸ್ತಿಗಳ ನಡುವಿನ ಹಗ್ಗ ಜಗ್ಗಾಟದಿಂದ ರಾಜ್ಯದ ಜನರಿಗೆ ಸಮರ್ಪಕ ಆಡಳಿತ ನೀಡದ್ದಕ್ಕೆ ಬೇಸರಗೊಂಡು ರಮೇಶ್ ಕುಮಾರ್ ಈ ಪತ್ರವನ್ನು ಬರೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.

Comments

  1. Speaker Sir has told the reality which is visible in the action of Coalition Chief Minister HDK.

    ReplyDelete

Post a Comment